ಲೋಕ ಕಲ್ಯಾಣಾರ್ಥವಾಗಿ ಧಾರೇಶ್ವರನಿಗೆ ಸಹಸ್ರ ಕುಂಬಾಭಿಷೇಕ: ಕಳೆದ 25 ವರ್ಷದಿಂದ ನಡೆದುಕೊಂಡು ಬಂದಿದೆ ಈ ಸೇವೆ
ಕುಮಟಾ: ಲೋಕ ಕಲ್ಯಾಣಾರ್ಥವಾಗಿ ಶ್ರೀ ಕ್ಷೇತ್ರ ಧಾರೇಶ್ವರ ಶ್ರೀ ಧಾರಾನಾಥ ಸ್ವಾಮಿಯ ಸನ್ನಿಧಿಯಲ್ಲಿ ವಾರ್ಷಿಕವಾಗಿ ನಡೆಯುವ ಕುಂಭಾಭೀಷೇಕ ಪೂಜೆಯು ಏಕಾದಶಿ ತಿಥಿಯಂದು ಶದ್ದಾಭಕ್ತಿಯಿಂದ ನೂರಾರು ವಿಪ್ರ ಭಕ್ತರು ಸೇರಿ ನಡೆಸಿದರು. 25 ವರ್ಷಕ್ಕೂ ಅಧಿಕ ಕಾಲದಿಂದ ಪ್ರತಿ ವರ್ಷದಂದು ಈ ಪುಣ್ಯ ದೇವತಾ ಕಾರ್ಯ ನಡೆಸಿಕೊಂಡು ಬಂದ ವಿಪ್ರ ಭಕ್ತ ವ್ರಂದವು ನಡೆಸಿಕೊಂಡು ಬಂದಿದೆ. ಕುಂಭಾಭೀಷೇಕವು ದೇವಸ್ಥಾನದ ಅರ್ಚಕ ವ್ರಂದದಿoದ ಬೆಳಗ್ಗೆ 8.30ಕ್ಕೆ ಸಂಕಲ್ಪಿತ ಪೂಜೆಯಿಂದ ಆರಂಭಗೊAಡಿದ್ದು, 10 ಗಂಟೆಯಿoದ ನೂರಾರು ವಿಪ್ರ ಭಕ್ತರು ಧಾರೇಶ್ವರನಿಗೆ ಕುಂಬಾಭಿಷೇಕಕ್ಕಾಗಿ ನೀರನ್ನು ಕೊಡದಲ್ಲಿ ತುಂಬಿಸಿ ಒಬ್ಬರಿಂದ ಒಬ್ಬರಿಗೆ ನೀಡುತ್ತಾ ಸಹಸ್ರ ಕುಂಭದಿoದ ಅಭಿಷೇಕ ನಡೆಸಿದರು.
ನಂತರ ಧಾರೇಶ್ವರನ ಪ್ರಸಾದ ಭೋಜನವನ್ನು ಸ್ವೀಕರಿಸಿ ದೇವರ ಕ್ರಪೆಗೆ ಪಾತ್ರರಾದರು. ಆಡಳಿತ ಮಂಡಳಿಯ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವ್ರಂದ ಮತ್ತು ಊರಿನ ಹಾಗೂ ಪರ ಊರಿನ ಭಕ್ತರು, ಯುವಕರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್, ಕುಮಟಾ