ಹೊನ್ನಾವರ: ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಎಸ್.ಡಿ.ಎಂ. ಪದವಿ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಡಾ. ಪಿ. ಎಂ. ಹೊನ್ನಾವರ ಅವರು ಅಧಿಕಾರ ಸ್ವೀಕರಿಸಿದರು. ಡಾ. ಪ್ರೇಮಾನಂದ ಹೊನ್ನಾವರ ಅವರು ಹೊನ್ನಾವರ ತಾಲೂಕಿನ ಬಾಂದೇಹಳ್ಳದ ನಿವಾಸಿಯಾಗಿದ್ದು, ಎಸ್.ಡಿ.ಎಂ. ಕಾಲೇಜಿನ ಪೂರ್ವವಿದ್ಯಾರ್ಥಿಯಾಗಿದ್ದು, 1986 ರಿಂದ ಕಾಲೇಜಿನ ರಸಾಯನಶಾಸ್ತç ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆಯನ್ನು ಆರಂಭಿಸಿದರು. ನಂತರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಇವರು ಎಂ.ಎಸ್ಸಿ. ಸ್ನಾತಕೋತ್ತರ ವಿಭಾಗದ ಸಂಯೋಜಕರಾಗಿ ಕಳೆದ ಸಾಲಿನಲ್ಲಿ ಐ.ಕ್ಯೂ..ಎ.ಸಿ. ಯ ಸಂಯೋಜಕರಾಗಿ ವಿವಿಧ ಹುದ್ದೆಗಳಲ್ಲಿ ತೃಪ್ತಿಕರವಾಗಿ ಸೇವೆ ಸಲ್ಲಿಸಿದ್ದಾರೆ.
2021 ರಲ್ಲಿ ತುಮಕೂರು ವಿ.ವಿ.ಯಿಂದ ರಸಾಯನಶಾಸ್ತç ವಿಷಯದಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದಿರುವ ಇವರನ್ನು ಸೇವಾ ಹಿರಿತನದ ಆಧಾರದ ಮೇಲೆ ಆಡಳಿತ ಮಂಡಳಿಯು ಪ್ರಾಚಾರ್ಯರನ್ನಾಗಿ ನೇಮಿಸಿದೆ. ಅವರು ಶನಿವಾರದಂದು ಅಧಿಕಾರ ಸ್ವೀಕರಿಸಿದರು.
ನೂತನ ಪ್ರಾಚಾರ್ಯರಿಗೆ ಆಡಳಿತ ಮಂಡಳಿ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.
ವಿಸ್ಮಯ ನ್ಯೂಸ್, ಹೊನ್ನಾವರ