Big News
Trending

ಉಸಿರುಗಟ್ಟಿ ನರಳಾಡುತ್ತ ದನಗಳು ಸಾವನ್ನಪ್ಪುತ್ತಿದೆ ದನ

ಅವಾಂತರ ಸೃಷ್ಟಿಸುತ್ತಿದೆ ತ್ಯಾಜ್ಯವಿಲೇವಾರಿ ಘಟಕ
ಸೂಕ್ತಕ್ರಮಗೊಳ್ಳುವಂತೆ ಅಧಿಕಾರಿಗಳಿಗೆ ಸಾರ್ವಜನಿಕರ ಆಗ್ರಹ

ಕಾರವಾರ: ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ತ್ಯಾಜ್ಯ ತಿಂದು ನಾಲ್ಕು ದನಗಳು ಸಾವನ್ನಪ್ಪಿರುವ ಘಟನೆ ಕಾರವಾರದ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದ ಸಮೀಪ ನಡೆದಿದೆ. ನಗರಸಭೆ ವ್ಯಾಪ್ತಿಯ ತ್ಯಾಜ್ಯವನ್ನು ಶಿರವಾಡದಲ್ಲಿರುವ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತದೆ. ಆದರೆ ಇಲ್ಲಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೂಕ್ತ ಕಂಪೌಂಡಗೋಡೆ ಇಲ್ಲದಿರುವುದರಿಂದ ಇಲ್ಲಿ ಬೀದಿನಾಯಿಗಳು, ದನಕರುಗಳು ಒಳ ಹೋಗುತ್ತವೆ. ಅಲ್ಲದೆ ರಾಶಿ ಹಾಕಲಾಗಿರುವ ತ್ಯಾಜ್ಯ ತಿನ್ನುತ್ತವೆ.

ಒಣ ಮತ್ತು ಹಸಿ ತ್ಯಾಜ್ಯವನ್ನು ವಿಂಗಡಿಸುವ ಘಟಕಕ್ಕೆ ಕೆಲ ತ್ಯಾಜ್ಯವನ್ನು ಮಾತ್ರ ಹಾಕಿ ಇನ್ನುಳಿದ ತ್ಯಾಜ್ಯವನ್ನು ಪಕ್ಕದಲ್ಲಿರುವ ಪ್ರದೇಶದಲ್ಲಿ ರಾಶಿ ಹಾಕಲಾಗುತ್ತದೆ. ಹೀಗಾಗಿ ಈ ಪ್ರದೇಶಕ್ಕೆ ಪ್ರತಿದಿನ ನೂರಾರು ಬೀಡಾಡಿದನಗಳು ಮತ್ತು ಜನರು ಸಾಕಿರುವ ದನಕರುಗಳು ಸೇರುತ್ತವೆ.

ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಅಥವಾ ಇನ್ನಿತರ ರಾಸಾಯನಿಕ ವಸ್ತುಗಳೊಂದಿಗೆ ಆಹಾರ ಪದಾರ್ಥಗಳು, ತರಕಾರಿಗಳು ಇರುತ್ತಿರುವುದರಿಂದ ದನಕರುಗಳು ಇವುಗಳನ್ನು ತಿನ್ನುತ್ತವೆ. ಅದರಂತೆ ಇತ್ತೀಚೆಗೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯ ತಿಂದ ಹಲವು ದನಗಳು ಸಾವನ್ನಪ್ಪಿದ್ದು, ಗುರುವಾರ ಸಹ 4 ದನಗಳು ಸಾವನ್ನಪ್ಪಿವೆ. ಈ ಕುರಿತ ವಿಡಿಯೋ ಇಲ್ಲಿದೆ ನೋಡಿ

ಉಸಿರುಗಟ್ಟಿ ನರಳಾಡುತ್ತ ದನಗಳು ಸಾವನಪ್ಪುತ್ತಿರುವ ಬಗ್ಗೆ ಸ್ಥಳೀಯರು ನಗರಸಭೆಗೆ ಮಾಹಿತಿ ನೀಡಿದರು. ಬಳಿಕ ಆಗಮಿಸಿದ ನಗರಸಭೆ ಕಾರ್ಮಿಕರು ದನಗಳ ಕಳೆಬರ ಹುಗಿದಿದ್ದಾರೆ. ಅಲ್ಲದೆ ತ್ಯಾಜ್ಯ ವಿಲೇವಾರಿ ಘಟಕದ ಅವ್ಯವಸ್ಥೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಾಣಿಗಳು ತೆರಳದಂತೆ ಕ್ರಮವಹಿಸುವಂತೆ ಆಗ್ರಹಿಸಿದ್ದಾರೆ

ವಿಸ್ಮಯ ನ್ಯೂಸ್, ಕಾರವಾರ

Back to top button