ಶವವಾಗಿ ಪತ್ತೆಯಾದ ಬೈಕ್ ಸವಾರ

ಕಡ್ನೀರು ಕುಟುಂಬದಲ್ಲಿ ಕಣ್ಣೀರು
ನೀಡಬೇಕಿದೆ ಮಾನವೀಯ ನೆರವಿನ ಪರಿಹಾರ

[sliders_pack id=”1487″]

ಅಂಕೋಲಾ : ತಾಲೂಕಿನ ಡೊಂಗ್ರಿ ಗ್ರಾ.ಪಂ ವ್ಯಾಪ್ತಿಯ ಗುಳ್ಳಾಪುರ ಸೇತುವೆ ಬಳಿ, ರಸ್ತೆಯಲ್ಲಿ ಸಾಗುತ್ತಿರುವಾಗ, ನೀರಿನ ರಭಸ ಅಂದಾಜಿಸಲಾಗದೇ ಬೈಕ್ ಸವಾರ ಆಯ ತಪ್ಪಿ ಪಕ್ಕದಲ್ಲಿಯೇ ಜಾರಿ ಬಿದ್ದು ತನ್ನ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿಹೋಗಿದ್ದ ಘಟನೆ ಬುಧವಾರ ನಡೆದಿತ್ತು. ಈ ಕುರಿತು ಆತನೊಂದಿಗೆ ಇದ್ದ ಸಹೋದರ ಮಾವ ಸೀತಾರಾಮ ನಾಗಪ್ಪ ನಾಯ್ಕ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದರು.©Copyright reserved by Vismaya tv

ನೀರಿನಲ್ಲಿ ಕೊಚ್ಚಿಹೋಗಿ ಕಾಣೆಯಾಗಿದ್ದ ಸಂತೋಷ ಮೋಹನ ನಾಯ್ಕ(29), ಈತನು ಘಟನಾ ಸ್ಥಳದ ಅನತಿ ದೂರದಲ್ಲಿಯೇ ಶವವಾಗಿ ತೇಲುತ್ತಿರುವುದನ್ನು ಗುರುವಾರ ಬೆಳಿಗ್ಗೆ ಗಮನಿಸಿದ ಸ್ಥಳೀಯರು, ಅಂಕೋಲಾ ಪೊಲೀಸ್ ಮತ್ತು ಯಲ್ಲಾಪುರ ಅಗ್ನಿಶಾಮಕ ಧಳದ ಸಿಬ್ಬಂದಿಗಳ ಸಹಕಾರದಲ್ಲಿ ಮೃತದೇಹವನ್ನು ನೀರಿನಿಂದ ಮೇಲೆತ್ತಿದರು. ಈ ಸಂದರ್ಭದಲ್ಲಿ ಪಿ.ಎಸ್.ಐ ಇ.ಸಿ ಸಂಪತ್, ಪಿ.ಡಿ.ಓ ಗಿರೀಶ ನಾಯಕ ಮತ್ತಿತರರು ಹಾಜರಿದ್ದರು. ಮೃತದೇಹವನ್ನು ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದು ಬಂದಿದೆ.

ಕಡ್ನೀರು ಕುಟುಂಬದ ಕಣ್ಣೀರ ವ್ಯಥೆ : ಮೂಲತಃ ಹೊನ್ನಾವರ ತಾಲೂಕಿನ ಕಡ್ನೀರು ಗ್ರಾಮದವನಾದ ಮೃತ ಸಂತೋಷ ನಾಯ್ಕ, ಕಳೆದ ಕೆಲ ತಿಂಗಳ ಹಿಂದಷ್ಟೇ, ಅಂಕೋಲಾ ತಾಲೂಕಿನ ಡೊಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೇಶ್ವರದಲ್ಲಿ ತನ್ನ ಹೆಂಡತಿ ಮತ್ತು ಎರಡು ಪುಟ್ಟ ಮಕ್ಕಳೊಂದಿಗೆ ಬಂದು, ಅಲ್ಲಿಯೇ ಓರ್ವ ತೋಟದ ಮಾಲೀಕರ ಬಳೀ ಕೃಷಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದ ಎನ್ನಲಾಗಿದೆ. ಬಡ ಕುಟುಂಬದ ಜೀವನ ನಿರ್ವಹಣೆಗೆ ಈತನ ದುಡಿಮೆಯೇ ಆಧಾರಸ್ತಂಭವಾಗಿದ್ದು, ನಡುನೀರಿನಲ್ಲಿ ಕೊಚ್ಚಿಹೋಗಿ ಮೃತನಾದ ಸಂತೋಷನಿಂದಾಗಿ, ಆತನ ಬಡ ಕುಟುಂಬದ ಸಂತೋಷವು ಕೊಚ್ಚಿ ಹೋದಂತಾಗಿದೆ.

ಸಂಘ-ಸಂಸ್ಥೆಗಳು, ಧಾನಿಗಳು ಮತ್ತು ಸರ್ಕಾರ ತುರ್ತು ಪರಿಹಾರ ನೀಡುವ ಮೂಲಕ ಕಡ್ನೀರು ಕುಟುಂಬದ ಕಣ್ಣೀರೊರೆಸುವ ಮಾನವೀಯ ಕಾರ್ಯಕ್ಕೆ ಮುಂದಾಗಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version