Focus News
Trending

ಭಾರೀ ಮಳೆ: ತಗ್ಗುಪ್ರದೇಶಗಳು ಜಲಾವೃತ

ಹೊನ್ನಾವರ: ತಾಲೂಕಿನಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಎಡಬಿಡದೆ ಸುರಿದ ಭಾರಿ ಮಳೆಗೆ ತಾಲೂಕಿನಾದ್ಯಂತ ಹಳ್ಳ-ಕೊಳ್ಳಗಳು ತುಂಬಿ ಹರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪಟ್ಟಣದ ಗೇರುಸೋಪ್ಪಾ ಸರ್ಕಲ್ ಸಮೀಪ ಐ ಆರ್ ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಹೆದ್ದಾರಿಯ ಮೇಲೆ ನೀರು ತುಂಬಿಹರಿದು ಸಂಚಾರ ಅಸ್ತವ್ಯಸ್ಥಗೊಂಡು ಟ್ರಾಪಿಕ್ ಸಮಸ್ಯೆ ಉಂಟಾಗಿತ್ತು, ತಾಲೂಕಿನ ಬಾಸ್ಕೇರಿ ನದಿ ತುಂಬಿಹರಿದಿದ್ದು, ನದಿಯ ಅಕ್ಕಪಕ್ಕದಲ್ಲಿರುವ ಮನೆಯ ಅಂಗಳದ ತನಕ ತಲುಪಿದ ನೀರು ಸುತ್ತ ಮುತ್ತಲಿನ ತೋಟ ಗದ್ದೆಗಳು ಜಲಾವ್ರತಗೊಳಿಸಿದೆ.

ಹಡಿನಬಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಮಸುಕಲಮಕ್ಕಿ ಹೆದ್ದಾರಿ 69 ರಲ್ಲಿ ರಾತ್ರಿ ಗುಡ್ಡ ಕುಸಿತದ ಪರಿಣಾಮ ಸ್ವಲ್ಪ ಸಮಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುತ್ತು. ಬೆಳಿಗ್ಗೆ ನೋಡೆಲ್ ಅಧಿಕಾರಿಗಳು, ಹೆದ್ದಾರಿಯ ಇಂಜಿನಿಯರ, ಗ್ರಾಮ ಪಂಚಾಯತ ಅಭಿವೃದ್ದಿ ಅದ್ದಿಕಾರಿಗಳು , ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಹೆದ್ದಾರಿ 69 ರಲ್ಲಿ ಆರೋಳ್ಳಿ ಬಾಸ್ಕೆರಿ ಹಡಿನವಾಳ-ಖರ್ವಾ-ಮುಡ್ಕಣಿ-ಉಪ್ಪೋಣಿ-ಅಳಂಕಿ ಗೇರುಸೋಪ್ಪಾ ಸೇರಿದಂತೆ ಅಲ್ಲಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದ್ದು, ಇನ್ನಷ್ಟು ಕುಸಿಯುವ ಬೀತಿ ಎದುರಾಗಿದೆ.

ಹಳದಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಲ್ಲಲ್ಲಿ ನೀರು ನಿಂತಿರುವ ಪರಿಣಾಮ ಸಂಚಾರಕ್ಕೆ ತೋಂದರೆ ಉಂಟಾಗಿ ತಗ್ಗು ಪ್ರದೇಶದ ಮನೆಗಳಿಗೆ ಆತಂಕ ಉಂಟಾಗಿತ್ತು. ಗ್ರಾಮ ಪಂಚಾಯತ ಅಧಿಕಾರಿಗಳು ಕೆಲವು ಜನಪ್ರತಿನಿಧಿಗಳು ಸ್ಥಳಕೆ ಭೇಟಿನೀಡಿ ಜೆ ಬಿ ಸಿ ಬಳಸಿ ನೀರನ್ನು ತೆರವುಗೊಳಿಸಿದ್ದಾರೆ. ಮಂಕಿ, ಗುಣವಂತೆ, ಅನಂತವಾಡಿ ಭಾಗದಲ್ಲಿ ಅಲ್ಲಲಿ ರಸ್ತೆಯಮೇಲೆ ನೀರು ತುಂಭಿ ಹರಿದ ಪರಿಣಾಮ ಸಂಚಾರಕ್ಕೆ ತುಂಭಾ ತೋಂದರೆ ಉಂಟಾಗಿದೆ ಬೈಕ್ ಸವಾರರ ಪಾಡು ಹೇಳತಿರದಂತಾಗಿತ್ತು

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button