Important
Trending

ಸತ್ತವರ ಹೆಸರು ಬಳಸಿಕೊಂಡು ದಾಖಲೆ ಸೃಷ್ಟಿಸಿ ಹಣ ವಂಚನೆ: ಕುಖ್ಯಾತ ಹ್ಯಾಕರ್ ಅರೆಸ್ಟ್

ಕುಮಟಾ: ಮರಣ ಹೊಂದಿದ ಜನರ ದಾಖಲೆ ಬಳಸಿಕೊಂಡು ಬ್ಯಾಂಕ್ ಲೋನ್ ಮಾಡಿ 9 ಕಾರ್ ಮತ್ತು 13 ಐಫೋನ್ ಕರಿದಿಸಿದ್ದ ವಂಚಕ ಚನರಾಯಪಟ್ಟಣದ ಹಿರೆಸಾವೆಯ ದಿಲೀಪ ಬಿ.ಆರ್ ಈತನನ್ನು ಕುಮಟಾ ಪಿ.ಎಸ್.ಐ ನವೀನ್ ನಾಯ್ಕ ಅವರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.ಕುಮಟಾದ ಸುಬ್ಬರಾವ ಕಡೆಕೋಡಿ ಅವರು ನೀಡಿದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಆರೋಪಿಯು ಪರಿಣಿತ ಹ್ಯಾಕರ್ ಅಂತಾ ತನಿಖೆ ಕೈಗೊಂಡ ಬಳಿಕ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಹೀಗಾಗಿ ಆಳ ತನಿಖೆಗೆ ಇಳಿದ ಪೊಲೀಸರು ಈತನ ಬಣ್ಣವನ್ನು ಬಯಲು ಮಾಡಿದ್ದಾರೆ.

ಈತ ಇನ್‌ಕಮ್ ಟ್ಯಾಕ್ಸ್ ವೆಬ್‌ಸೈಟ್ ಕೂಡಾ ಹ್ಯಾಕ್ ಮಾಡಿ, ಲಕ್ಷಾಂತರ ತೆರಿಗೆ ಹಣ ಚಂಚಿಸಿದ್ದ ಎನ್ನಲಾಗಿದ್ದು, ಆಗಾರ ಚಹರ ಬದಲಿಸಿಕೊಳ್ಳುತ್ತಿದ್ದ. ವಂಚನೆಗಾಗಿ ತನ್ನದೇ ಸಾಫ್ಟ್ ವೇರ್ ಬಳಸಿಕೊಂಡಿದ್ದ ಎನ್ನಲಾಗಿದೆ. ಆರೋಪಿಯು ಬೆಂಗಳೂರಿನ ಸ್ಟಾರ್ ಲೈಫ್ ಇನ್ಶುರೆನ್ಸ್ ಕಂಪನಿಯಲ್ಲಿ ಉದ್ಯೋಗಿ ಆಗಿದ್ದು, ಬಿ.ಇ ಮೆಕಾನಿಕಲ್ ಪದವೀಧರನಾಗಿದ್ದಾನೆ.

ಈತನ ಮೇಲೆ ಈಗಾಗಲೇ ಗೋವಾ, ಬೆಂಗಳೂರು, ತುಮಕೂರು, ಹಾಸನ ವಿವಿಧ ಠಾಣೆಗಳಲ್ಲಿ 10 ವಂಚನೆಯ ಪ್ರಕರಣ ದಾಖಲಾಗಿದೆ. ಕುಮಟಾದ ಶಮಂತಕ ಸುಬ್ಬರಾವ ಕಡೆಕೋಡಿ ಈತನು ಮರಣ ಹೊಂದಿದ್ದ. ಈತನ ದಾಖಲೆ ಬಳಸಿ ಸಾಲ ಪಡೆದು ಐಫೋನ್ ಮತ್ತು ಕಾರನ್ನು ಖರೀದಿಸಿದ್ದ. ಕುಮಟಾ ಸಿ.ಪಿ.ಐ ತಿಮ್ಮಪ್ಪ ನಾಯ್ಕ ಮಾರ್ಗದರ್ಶನದಲ್ಲಿ ಕುಮಟಾ ಪಿ.ಎಸ್.ಐ ನವೀನ ನಾಯ್ಕ ಅವರು ಕೈಗೊಂಡ ಈ ಪ್ರಕರಣದ ತನಿಖೆಗೆ ಗಣೇಶ ನಾಯ್ಕ, ಗುರು ನಾಯಕ, ಪ್ರದೀಪ ನಾಯಕ ಸಹಕಾರ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Back to top button