Follow Us On

WhatsApp Group
Important
Trending

ಟೋಲ್ ಗೇಟ್ ಬಳಿ ಇರುವ ಮಹಿಳೆ ಯಾರು ?ಸ್ಥಳೀಯ ಪೊಲೀಸ್ ಪ್ರಕಟನೆಯಲ್ಲಿ ಏನಿದೆ ? 

ಅಂಕೋಲಾ: ರಾ.ಹೆ 66 ರ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಕಳೆದ ಎರಡು ದಿನಗಳಿಂದ ಅಪರಿಚಿತ ಮಹಿಳೆಯೋರ್ವರು ಕಂಡು ಬಂದಿದ್ದು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಮಾತನಾಡುವ ಇವರ ಬಳಿ ವಿಚಾರಿಸಿದರೆ ತಮ್ಮ ಹೆಸರು ಶಾಂತಮ್ಮ (50 ವರ್ಷ), ತಮಿಳುನಾಡು ಕೃಷ್ಣಗಿರಿ ನಿವಾಸಿ ಗಂಡನ ಹೆಸರು ನಾರಾಯಣಪ್ಪ, ಮಗನ ಹೆಸರು ಸುಬ್ರಹ್ಮಣ್ಯ ಎಂದು ತಿಳಿಸುತ್ತಿದ್ದು, ತಾನು ತಮಿಳುನಾಡಲ್ಲಿ ವಾಸವಾಗಿದ್ದು ಮಗ ಕುಮಟಾದಲ್ಲಿ ತರಕಾರಿ ವ್ಯಾಪಾರ ಮಾಡುತ್ತಾನೆ, ಮಗ ಈಗ ಕೃಷ್ಣಗಿರಿಗೆ ಹೋಗಿದ್ದು ಬಂದು ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ ಅವನಿಗಾಗಿ ಕಾಯುತ್ತಿದ್ದೇನೆ ಎಂದು ಹೇಳುತ್ತಿದ್ದಾಳೆ.

ಮಹಿಳೆಗೆ ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕ್ರಿಸ್ತ ಮಿತ್ರ ಅನಾಥಾಶ್ರಮಕ್ಕೆ ಸೇರಿಸಲಾಗಿದೆ. ಮಹಿಳೆ ಮತ್ತು ವಾರಸುದಾರರ ಕುರಿತು ಮಾಹಿತಿ ಇದ್ದರೆ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0838823033. ಅಥವಾ ಅಂಕೋಲಾ ಪೊಲೀಸ್ ನಿರೀಕ್ಷಕರು ಮೊಬೈಲ್  ಸಂಖ್ಯೆ 9480805250 ಪಿ.ಎಸ್. ಐ ಮೊಬೈಲ್ ಸಂಖ್ಯೆ 9480805268 ಗೆ ಇಲ್ಲವೇ ತಮ್ಮ ಹತ್ತಿರದ ಪೋಲೀಸ್ ಠಾಣೆಗೆ ಸಂಪರ್ಕಿಸುವಂತೆ ಅಂಕೋಲಾ ಸಿಪಿಐ ಸಂತೋಷ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ

Back to top button