ಕಾರವಾರ: ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಮಳೆಯ ಅಬ್ಬರ ಜೋರಾಗಿದ್ದು, ಅದೇ ರೀತಿಯಾಗಿ ಕುಮಟಾ ತಾಲೂಕಿನಲ್ಲಿಯೂ ಕಳೆದ 2, 3 ದಿನಗಳಿಂದ ಬೆಂಬಿಡದೆ ಮಳೆ ಸುರಿಯುತ್ತಿದೆ. ನಿರಂತರವಾಗಿ ಮಳೆ ಬೀಳುತ್ತಿರುವದರಿಂದ ಒಂದೆಡೆ ಕೃಷಿ ಚಟುವಟಿಕೆಗಳು ಚುರುಕುಗೊಂಡರೆ, ಇನ್ನೊಂದೆಡೆ ಜೋರಾದ ಗಾಳಿ ಮಳೆಗೆ ತಾಲೂಕಿನ ವಿವಿದೆಡೆ ಹಲವು ಹಾನಿಗಳು ಸಂಭವಿಸಿದೆ. ಜೊತೆಗೆ ನದಿ ಅಘನಾಶಿನಿ ನದಿ ತೀರದ ಜನರಲ್ಲಿ ನೆರೆಯ ಆತಂಕವು ಸಹ ಶುರುವಾಗಿದೆ.
ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಘನಾಶಿನಿ ನದಿಯ ನೀರಿನ ಮಟ್ಟ ಜಾಸ್ತಿಯಾಗಿದೆ. ಇದೇ ರೀತಿ ಮಳೆ ಮುಂದುವರೆದಲ್ಲಿ ನದಿ ನೀರು ತುಂಬಿ ಹರಿದು ಕೃಷಿ ಜಮೀನುಗಳಿಗೆ, ನದಿ ತೀರದ ಮನೆಗಳಿಗೆ ನುಗ್ಗುವ ಸಾಧ್ಯತೆಗಳಿವೆ. ಕುಮಟಾ ಪುರಸಭಾ ವ್ಯಾಪ್ತಿಗೆ ಸಂಭoದಿಸಿದoತೆ ಕಳೆದೆರಡು ಮೂರು ದಿನಗಳಲ್ಲಿ ಗಾಳಿ ಮಳೆಯಿಂದಾಗಿ ಯಾವುದೇ ಹಾನಿ ಸಂಭವಿಸಿಲ್ಲ. ನೆಲ್ಲಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಎರಡು ಮರ ಬಿದ್ದಿದ್ದು, ಆದರೆ ಕಟ್ಟಡಕ್ಕಾಲಿ ಹಾಗೂ ಇನ್ನಿತರ ಯಾವುದೇ ಹಾನಿ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಕುಮಟಾ ಪುರಸಭೆಯ ವತಿಯಿಂದ ಮರವನ್ನು ತೆರವುಗೊಳಿಸಿಸುವ ಕಾರ್ಯ ಮಾಡಲಾಗಿದೆ ಎಂದು ಕುಮಟಾ ಪುರಸಭಾ ಮುಖ್ಯಾಧಿಕಾರಿಗಳು ನಮ್ಮ ವಿಸ್ಮಯ ಟಿ.ವಿ ಗೆ ಮಾಹಿತಿ ನೀಡಿದ್ದಾರೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.