ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರಡಿ ದಾಳಿ: ರೈತ ಸಾವು

ಕಾರವಾರ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದು ತೀವ್ರ ರಕ್ತಸ್ರಾವದಿಂದ ರೈತ ಮೃತಪಟ್ಟ ಘಟನೆ ಮುಂಡಗೋಡ ತಾಲೂಕಿನ ಮರಗಡಿ ಗೌಳಿದೊಡ್ಡಿ ಗ್ರಾಮದಲ್ಲಿ ನಡೆದಿದೆ. ಜಿಮ್ಮು ವಾಗು ತೋರವತ್ (58) ಮೃತಪಟ್ಟ ರೈತ ಎಂದು ತಿಳಿದುಬಂದಿದೆ. ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕರಡಿ ದಾಳಿ ನಡೆಸಿದ್ದು, ಪರಿಣಾಮವಾಗಿ ರೈತನ ತಲೆ,ಕುತ್ತಿಗೆ,ಬಲಗಾಲು ಮತ್ತು ಬಲಕೈಗೆ ತೀವ್ರ ಗಾಯವಾಗಿದೆ. ಹೀಗಾಗಿ ರಕ್ತಸ್ರಾವದಿಂದ ರೈತ ಮೃತಪಟ್ಟಿದ್ದಾನೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version