ImportantJob News
Trending

Mega Job Fair: ಆಗಸ್ಟ್ 6 ರಂದು ಬೃಹತ್ ಉದ್ಯೋಗ ಮೇಳ: ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ: ಪ್ರತಿಷ್ಠಿತ 35 ಕಂಪೆನಿಗಳು ಭಾಗಿ

SSLC, PUC, ITI, ಡಿಪ್ಲೊಮಾ, ಪದವಿ ಆದವರಿಗೆ ಸುವರ್ಣಾವಕಾಶ

ಕಾರವಾರ: ಆಗಸ್ಟ್ 6 ರಂದು ಇಲ್ಲಿನ ದಿವೆಕರ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಷ್ಠಿತ 35 ಕಂಪೆನಿಗಳು ಈ ಉದ್ಯೋಗ ಮೇಳಕ್ಕೆ ಆಗಮಿಸುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ. ಈ ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿoಗ್, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ 18 ವರ್ಷ ಮೇಲ್ಪಟ್ಟ ಯುವಕ, ಯುವತಿಯರು ಭಾಗವಹಿಸಬಹುದು. © vismaya tv. ಆಕಾಂಕ್ಷಿಗಳು 8884461670 ಅಥವಾ 8884461669 ಈ ಸಂಖ್ಯೆಗೆ ಕಾಲ್ ಮಾಡುವ ಮೂಲಕ ಇಲ್ಲವೆ https://karwarjf.meritude.in ಈ ಜಾಲತಾಣದಲ್ಲಿ ವಿವರ ದಾಖಲಿಸುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಉದ್ಯೋಗಾವಕಾಶ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು

ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳಿದ್ದು, ಟಾಟಾ, ಬಾಷ್, ಪ್ಲಿಪ್‌ಕಾರ್ಟ್, ರಿಲಯನ್ಸ್, ಎಚ್‌ಜಿಎಸ್ ಸೇರಿದಂತೆ ಹಲವು ಪ್ರತಿಷ್ಠಿತ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ. ಆಸಕ್ತ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊoಡು, ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಸ್ಥಳಕಾರವಾರ
ಸಂಪರ್ಕ ಸಂಖ್ಯೆ8884461670, 8884461669
ಹೆಸರು ನೋಂದಣಿಗೆಇಲ್ಲಿ ಕ್ಲಿಕ್ ಮಾಡಿ

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ವಿಸ್ಮಯ ನ್ಯೂಸ್, ಕಾರವಾರ

Back to top button