Follow Us On

WhatsApp Group
Focus News
Trending

ಶಾಸಕರ ಅಧ್ಯಕ್ಷತೆಯಲ್ಲಿ ವಿದ್ಯುತ್ ಗ್ರಾಹಕರ ಮತ್ತು ಅಧಿಕಾರಿಗಳ ಸಭೆ| ಕುಂದು – ಕೊರತೆಗಳಿದ್ದರೆ ಗಮನಕ್ಕೆ ತರುವಂತೆ ಸೂಚನೆ

ನಿರ್ವಹಣೆ ಮತ್ತು ದುರಸ್ಥಿ ಕಾರ್ಯದ ನಿಮಿತ್ತ ಅಂಕೋಲಾದಲ್ಲಿ ವಿದ್ಯುತ್ ವ್ಯತ್ಯಯ ಸಾಧ್ಯತೆ

ಅಂಕೋಲಾ : ಆಗಸ್ಟ್ 2 ರ ಬುಧವಾರ ಅಂಕೋಲಾದ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳು ಸೇರಿ ಹಲವೆಡೆ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆಗಳಿದೆ. ಅಂಕೋಲಾ ಉಪ ವಿಭಾಗದ 33 / 11 ಕೆ.ವಿ ಉಪ ವಿದ್ಯುತ್ ವಿತರಣಾ ಕೇಂದ್ರ ಮಾಸ್ತಿಕಟ್ಟಾ, 33/ 11 ಕೆವಿ ಉಪವಿದ್ಯುತ್ ವಿತರಣಾ ಕೇಂದ್ರ ಅಂಕೋಲಾ, 110 / 33 / 11 ಕೆವಿವಿದ್ಯುತ್ ವಿತರಣಾ ಕೇಂದ್ರ ಬಾಳೆಗುಳಿ, 110 /11 ಕೆವಿ ಶಕ್ತಿಪರಿವರ್ತಕ ಹಾಗೂ ಜಿ. ಓ. ಎಸ್. ಗಳ ನಿರ್ವಹಣಾ ಕೆಲಸ ಇಟ್ಟುಕೊಂಡಿರುವುದರಿಂದ ಅಂಕೋಲಾ, ಮಾಸ್ತಿಕಟ್ಟಾ, ಗುಳ್ಳಾಪುರ, ಸೀಬರ್ಡ, ವಜ್ರಕೋಶ, ಬೆಲೇಕೇರಿ, ಅಗಸೂರು, ನವಗದ್ದೆ, ಶಿರಗುಂಜಿ, ಹೊನ್ನಳ್ಳಿ ರಾಮನ ಗುಳಿ, ಹಡಿನಗದ್ದೆ, ಹಳವಳ್ಳಿ, ಅಂಬಾರಕೋಡ್ಲ, ಗುಂಡಬಾಳ, ವಂದಿಗೆ, ಅಗ್ರಗೋಣ ಮತ್ತಿತರ ಫೀಡರ ಗಳ ವ್ಯಾಪ್ತಿಯ ಪ್ರದೇಶಗಳಿಗೆ ಆಗಸ್ಟ್ 2 ರ ಬುಧವಾರ ಬೆಳಿಗ್ಗೆ 10 ಘಂಟೆ ಇಂದ ಮಧ್ಯಾಹ್ನ 2 ಘಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಬಹುದು.

ಕಾರಣ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಂಕೋಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. *ದಿನಾಂಕ.2.8.2023 ರಂದು ಬೆಳಗ್ಗೆ 11 ಘಂಟೆಗೆ ಅಂಕೋಲಾ ತಾಲೂಕ ಪಂಚಾಯತ ಸಭಾಭವನದಲ್ಲಿ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕರಾದ ಸತೀಶ್ ಸೈಲ್ ಅವರ ಅಧ್ಯಕ್ಷತೆಯಲ್ಲಿ ವಿದ್ಯುತ್ ಗ್ರಾಹಕರ, ಹೆಸ್ಕಾಂ ಅಧಿಕಾರಿಗಳ ಸಭೆ ಹಮ್ಮಿಕೊಳ್ಳಲಾಗಿದ್ದು, ಸ್ಥಳೀಯ ಹೆಸ್ಕಾಂ ಅಧಿಕಾರಿಗಳು ಹಾಜರಿರಲಿರುವ ಇ ಸಭೆಯಲ್ಲಿ ತಾಲೂಕು ವ್ಯಾಪ್ತಿಯ ಗ್ರಾಹಕರು ತಮ್ಮ ಕುಂದು – ಕೊರತೆ ದೂರುಗಳೇನಾದರೂ ಇದ್ದರೆ ಶಾಸಕರ ಸಮ್ಮುಖದಲ್ಲಿ ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ತಿಳಿಸಬಹುದಾಗಿದೆ.

ಅಂತಹ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಯತ್ನಿಸಲಾಗುತ್ತದೆ. ಆದ್ದರಿಂದ ಅಂಕೋಲಾ ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕರು – ಹೆಸ್ಕಾಂ ಇಲಾಖೆಯ ಗ್ರಾಹಕರು ಆಗಮಿಸಿ, ಈ ಸಭೆಯ ಪ್ರಯೋಜನ ಪಡೆದು ಕೊಳ್ಳಲು ಕೋರಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button