Focus News
Trending

ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ: ಬಸ್ ಚಾಲಕನ ತರಾಟೆಗೆ ತೆಗೆದುಕೊಂಡ ಮುಖಂಡರು

ಹೊನ್ನಾವರ : ಗೇರಸಪ್ಪಾ ಮಾರ್ಗದ ಬಸ್ ಚಾಲಕ ಜನಾರ್ಧನ ನಾಯ್ಕ ಎಂಬುವವರು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳೊಂದಿಗೆ ತೀರಾ ಅನುಚಿತವಾಗಿ ವರ್ತಿಸುತ್ತಾ, ದಾರಿ ಮಧ್ಯದಲ್ಲಿ ಬಸ್‌ನಲ್ಲಿ ಸ್ಥಳಾವಕಾಶ ಇದ್ದರೂ, ಬಸ್ ನಿಲ್ಲಿಸದೇ ಮನಸ್ಸಿಗೆ ತೋಚಿದಂತೆ ವರ್ತಿಸುವುದನ್ನು ಖಂಡಿಸಿ ಇಂದು ನ್ಯಾಯವಾದಿ ಎಂ.ಎನ್.ಸುಬ್ರಮಣ್ಯ ಮತ್ತು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ನೇತ್ರತ್ವದಲ್ಲಿ ಹೊನ್ನಾವರ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿಗಳ ಕಛೇರಿಗೆ ತೆರಳಿ ಬಸ್ ಚಾಲಕ ಮತ್ತು ನಿರ್ವಾಹಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಈ ವೇಳೆ ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ತಪ್ಪೊಪ್ಪಿಕೊಂಡು ಇನ್ನೂ ಆ ರೀತಿ ಆಗದಂತೆ ಎಚ್ಚರವಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಅನೇಕ ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಬಹಳಷ್ಟು ಉತ್ತಮ ಚಾಲಕರು, ನಿರ್ವಾಹಕರ ನಡುವೆ, ಕೆಲ ಚಾಲಕರು ಮತ್ತು ನಿರ್ವಾಹಕರಿಂದ ಆಗುವ ತೊಂದರೆಯನ್ನು ಮುಖಂಡರ ಗಮನಕ್ಕೆ ತಂದರು. ಮುಂದೆ ಈ ರೀತಿ ಪುನಃ ಆದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಶಿಸ್ತು ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಸೂರಜ್ ನಾಯ್ಕ, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಾಲಚಂದ್ರ ನಾಯ್ಕ, ಕೃಷ್ಣ ಮಾರಿಮನೆ, ಕೃಷ್ಣ ಹರಿಜನ, ಮೋಹನ ನಾಯ್ಕ ಹಲವು ಪ್ರಯಾಣಿಕರು, ಸಾರ್ವಜನಿಕರು ಉಪಸ್ಥಿತರಿದ್ದು ಆಕ್ರೋಶ ವ್ಯಕ್ತ ಪಡಿಸಿದರು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button