Big News
Trending

ಕಾಲೇಜಿನಲ್ಲಿ ನಡೆದ ಕಳ್ಳತನ: 24 ಗಂಟೆಯೊಳಗೆ ಆರೋಪಿಗಳ ಬಂಧನ

ಶಿರಸಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಳ್ಳತನದ ಮೂವರು ಆರೋಪಿಗಳನ್ನು ಗ್ರಾಮೀಣ ಠಾಣೆಯ ಪೊಲೀಸರು 24 ಗಂಟೆಯೊಳಗೆ ಬಂದಿಸಿದ್ದಾರೆ. ಕಾಲೇಜಿನ ರೂಮ್ ನಂಬರ್ 38 ಹಾಗೂ 39 ರಲ್ಲಿ ಅಳವಡಿಸಿದ ಸುಮಾರು 74 ಸಾವಿರ ರೂ ಮೌಲ್ಯದ ಎರಡು ಪ್ರಾಜೆಕ್ಟರ್, ಎರಡು Android ಬಾಕ್ಸ್ ಹಾಗೂ ನಾಲ್ಕು ಸ್ಪೀಕರ್ ಗಳನ್ನು ಯಾರೋ ಕಳ್ಳತನ ಮಾಡಿರುವುದಾಗಿ ಕಾಲೇಜಿನ ಪ್ರಾಂಶುಪಾಲರು ಪೋಲಿಸ್ ಠಾಣೆಗೆ ದೂರು ನೀಡಿದ್ದರು.

ಅದರಂತೆ ಡಿವೈಎಸ್‌ಪಿ ಗಣೇಶ, ವೃತ್ತ ನಿರೀಕ್ಷಕರಾದ ರಾಮಚಂದ್ರ ನಾಯಕರವರ ಮಾರ್ಗದರ್ಶನದಲ್ಲಿ 24 ಗಂಟೆಯೊಳಗೆ ಪ್ರಕರಣದಲ್ಲಿ ಆರೋಪಿತರಾದ ಶಾಂತಿನಗರದ ವಿನಯ ಗೌಳಿ, ಗನೇಶನಗರದ ಪವನಕುಮಾರ ಹಾಗೂ ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಿ ಇವರಿಂದ ಕಳ್ಳತನವಾದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತರ ಪೈಕಿ ಇಬ್ಬರು ಅದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ದಯಾನಂದ ಜೊಗಳೇಕರ, ಸಿಬ್ಬಂದಿಗಳಾದ ಗಣಪತಿ ನಾಯಕ, ಮಹಾದೇವ ನಾಯಕ, ಅರುಣ ಕುಮಾರ್, ಜಾವೇದ್ ಶೇಖ್, ಶ್ರೀಧರ ನಾಯಕ, ರಾವ್ ಸಾಹೇಬ್ ಹಾಗೂ ಮನೋಜ್ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button