ಕುಮಟಾ: ಮನೋವಿಕಾಸ ಸಂಸ್ಥೆ ಶಿರಸಿ, ಅಮೇಜಾನ್ ಡೊನೇಟ್ ಕಾರ್ಡ ಇವರ ಸಹಯೋಗದೊಂದಿಗೆ ಕುಮಟಾ ತಾಲೂಕಿನ ಮಿರ್ಜಾನ ಖೈರೆ, ಊರುಕೇರಿ, ಕೋನಳ್ಳಿ ಗ್ರಾಮದ ಪ್ರವಾಹ ಸಂತ್ರಸ್ಥರಿಗೆ ಅಗತ್ಯ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮನೋವಿಕಾಸ ಸಂಸ್ಥೆಯ ನಿರ್ದೇಶಕರಾದ ಗಣಪತಿ ಭಟ್ಟ ಮಾತನಾಡಿ, ಪ್ರತಿ ವರ್ಷ ಮಳೆ ಆದಾಗ ತಾಲೂಕಿನ ನದಿ ತೀರದ ಜನರು ಭೀತಿಯಿಂದ ಜೀವನ ನಡೆಸುತ್ತಿದ್ದಾರೆ. ಜೀವನದ ಉಳಿವಿನ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಸರಕಾರದ ಗಮನ ಸೆಳೆಯುವಲ್ಲಿ ಪ್ರಮುಕ ಪಾತ್ರ ವಹಿಸುತ್ತದೆ. ಪ್ರಸ್ತುತ ಸಮಯದಲ್ಲಿ ನೇರವಾಗಿ ಪ್ರವಾಹ ಸಂತ್ರಸ್ಥರಾದ 111 ಕುಟುಂಭಗಳಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿದ್ದೇವೆ ಎಂದರು. ರೋಟರಿ ಅಧ್ಯಕ್ಷರಾದ ಎನ್.ಆರ್.ಗಜು ಅವರು ಮಾತನಾಡಿ, ಮನೋವಿಕಾಸ ಸಂಸ್ಥೆಯು ಕಳೆದ 20 ವರ್ಷಗಳಿಂದ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಪ್ರವಾಹ ಸಂಧರ್ಭದಲ್ಲಿ ಮನೋವಿಕಾಸ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಮನೋವಿಕಾಸ ಸಂಸ್ಥೆಯ ಸಿಬ್ಬಂದಿಗಳಾದ ಕುಮಟಾ ತಾಲೂಕಾ ಮ್ಯಾನೇಜರ್ ರಮೇಶ ನಾಯ್ಕ, ನಾಗರಾಜ ತದಡಿ, ಕಿರಣ ಗೌಡ, ಸೂರ್ಯ ಗುಂಡು, ಆಫರೇಶನ್ ಹೆಡ್ ಆದ ಗೀತಾ ಪಂಡಿತ್, ಬಾಲಚಂದ್ರ ಗೌಡ, ಗಣಪತಿ, ಗ್ರಾಮ ಪಂಚಾಯತ ಸದಸ್ಯರಾದ ವೈಭವ ನಾಐಕ, ಮಂಗಲ ಅಡಿಗುಂಡಿ ಹಾಗೂ ದೀಪಾ ಹೀಣಿಯವರು ಹಾಜರಿದ್ದರು.
ವಿಸ್ಮಯ ನ್ಯೂಸ್, ಕುಮಟಾ