Focus News
Trending

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಲಾತಂಡಗಳಿoದ ಅರ್ಜಿ ಆಹ್ವಾನ

ಕುಮಟಾ: 2023-24 ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಲಾತಂಡಗಳಿoದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಕಲಾತಂಡಗಳು ತಾವೇ ಸ್ವಂತ ಅರ್ಜಿ ಬರೆದು ಹಾಗೂ ತಾವು ಪ್ರದರ್ಶನ ನೀಡಿದ ದಾಖಲಾತಿಗಳನ್ನು ಛಾಯಾಚಿತ್ರ, ಕಲಾತಂಡದಲ್ಲಿರುವ ಒಟ್ಟು ಕಲಾವಿದರ ಸಂಪೂರ್ಣ ಮಾಹಿತಿ ಮತ್ತು ದೂರವಾಣಿ ಸಂಖ್ಯೆಯೊoದಿಗೆ ಅರ್ಜಿಯನ್ನು ಸಲ್ಲಿಸಬೇಕು. ಕಲಾತಂಡಗಳನ್ನು ಇಲಾಖೆಯ ಕಲಾತಂಡ ಪೊರ್ಟಲ್‌ನಲ್ಲಿ ಅಳವಡಿಸಿ ಕಲಾವಿದರ ವಿವರವನ್ನು ಪರಿಶೀಲಿಸಿ, ರೋಟೇಷನಲ್ ಆಧಾರದ ಮೇಲೆ ಆದ್ಯತೆ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ರಂಗಮoದಿರ, ಮಾಲಾದೇವಿ ಮೈದಾನ ಕಚೇರಿಯ ದೂರವಾಣಿ ಸಂಖ್ಯೆ 08382-227084 ಗೆ ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button