Important
Trending

ಹಿಂಸಾತ್ಮಕವಾಗಿ ಜಾನುವಾರು ಸಾಗಾಟ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಹಲವು ಜಾನುವಾರು ವಶಕ್ಕೆ

ಹೊನ್ನಾವರ : ಪಟ್ಟಣದ ಪ್ರತಿಭೋದಯ ಹಾಲ್ ಎದುರು ಅಕ್ರಮವಾಗಿ, ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಅಧಿಕೃತ ಪಾಸ್, ಪರ್ಮಿಟ ಇಲ್ಲದೇ, ಸರಿಯಾದ ಗಾಳಿ ಬೆಳಕು ಇರುವ ಕಂಪಾರ್ಟಮೆoಟಿನ ವ್ಯವಸ್ಥೆ ಮಾಡದೆ ಹಾಗೂ ಆಹಾರ , ನೀರಿನ ವ್ಯವಸ್ಥೆ ಮಾಡದೇ, ಬೊಲೋರೋ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಕೊoಡು ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು.

ಆರೋಪಿತರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಿಂಗಾಪುರ ಬೆಳಗಾಲಪೇಟೆನಿವಾಸಿಗಳಾದ ರೆಹಮಾನ್ ಸಾಬ್ ,ನವೀದ್ , ಯಲ್ಲಪ್ಪ ಬಂಕಪ್ಪ ಶಿವಣ್ಣನವರ ಎಂದು ಗುರುತಿಸಲಾಗಿದೆ. ಆರೋಪಿಗಳ ಸಮೇತ 2 ಎತ್ತು,2 ಹೋರಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ವೇಳೆ, ಇನ್ನೊಂದು ಪ್ರಕರಣದಲ್ಲಿ ಹೊನ್ನಾವರ ಪೋಲಿಸರು ಕಾರ್ಯಾಚರಣೆ ನಡೆಸಿ ಪಟ್ಟಣದ ಹೈವೇ ಸರ್ಕಲ್ ಹತ್ತಿರ ಇನ್ನೊಂದು ಪ್ರಕರಣವನ್ನು ಬೇಧಿಸಿದ್ದಾರೆ . ಬಂಧಿತ ಆರೋಪಿ, ಶಿರಸಿಯ ಮಹ್ಮದಗೌಸ ಅಕ್ಬರ್ ಖಾನ್ ಎಂದು ತಿಳಿದುಬಂದಿದೆ. ಈತನು ಬೊಲೆರೋದಲ್ಲಿ 5 ಜಾನುವಾರುಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದು, ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button