Important
Trending

ಮಗ ಮೃತಪಟ್ಟ ನೋವು: ಸಾವಿಗೆ ಶರಣಾದ ತಾಯಿ ಮತ್ತು ತಂಗಿ

ಶಿರಸಿ: ಅನಾರೋಗ್ಯಪೀಡಿತನಾಗಿದ್ದ ಮಗ ಸಾವುಕಂಡ ಬೆನ್ನಲ್ಲೆ ನೋವು ತಾಳಲಾರದೆ ತಾಯಿ ಮತ್ತು ತಂಗಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ತಾಲೂಕಿನಲ್ಲಿ ನಡೆದಿದೆ. ದೀಪಾವಳಿಯ ದಿನವೇ ಮನೆಯ ಮೂರು ದೀಪಗಳು ಆರಿ ಹೋದಂತಾಗಿದ್ದು, ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗುವಂತಾಗಿದೆ.

ತಾಲೂಕಿನ ಸದಾಶಿವಳ್ಳಿ ಪಂಚಾಯ್ತಿ ವ್ಯಾಪ್ತಿಯ ಮಾತ್ನಳ್ಳಿ ಗ್ರಾಮದ ನರ್ಮದಾ ಬಾಲಚಂದ್ರ ಹೆಗಡೆ ಮತ್ತು ಅವರ ಮಗಳು ದಿವ್ಯಾ ಬಾಲಚಂದ್ರ ಹೆಗಡೆ ಮೃತಪಟ್ಟವರು ಎಂದು ತಿಳಿದುಬಂದಿದೆ. ನರ್ಮದಾ ಅವರ ಮಗ ಉದಯ ಬಾಲಚಂದ್ರ ಹೆಗಡೆ ಸೋಮವಾರ ಸಾವನ್ನಪ್ಪಿದ್ದ. ಇದರಿಂದ ತೀವ್ರವಾಗಿ ನೊಂದಿದ್ದ ತಾಯಿ ಹಾಗು ಸೋದರಿ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಉದಯ ಬಾಲಚಂದ್ರ ಹೆಗಡೆ ಎಂಬ ಯುವಕ ಇತ್ತೀಚೆಗೆ ಅಸ್ವಸ್ಥನಾಗಿದ್ದು, ಬಳಿಕ ಚಿಕಿತ್ಸೆ ನೀಡಿದರೂ ಆರೋಗ್ಯ ಸುಧಾರಿಸದೆ ಸಾವನ್ನಪ್ಪಿದ್ದ. ಇದರಿಂದ ತಾಯಿ ಮತ್ತು ತಂಗಿ ತೀವ್ರವಾಗಿ ನೊಂದಿದ್ದರು. ಹೀಗಾಗಿ ತಾಯಿ-ತಂಗಿ ಕೂಡಾ ಪ್ರಾಣ ಕಳೆದುಕೊಳ್ಳುವ ನಿರ್ಧಾರ ತೆಗೆದುಕೊಂಡು, ರಾತ್ರಿ ನೇಣುಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button