ರಾಷ್ಟೀಯ ಈಡಿಗ ಮಹಾಮಂಡಳಿಯಿಂದ ಶಾಲೆಗೆ ಕ್ರೀಡಾ ಪರಿಕರಗಳನ್ನು ವಿತರಣೆ

ಅಂಕೋಲಾ : ವಿದ್ಯಾರ್ಥಿಗಳು ಪಠ್ಯದ ಜತೆಗೆ ಪೀಠೋಪಕರಣದ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಅವರ ವಯಸ್ಸಿಗೆ ತಕ್ಕಂತೆ ಕ್ರೀಡಾ ಸಾಮಾಗ್ರಿಗಳ ಮೂಲಕ ಅವರು ಬೆಳೆದರೆ ಮುಂದಿನ ಜೀವನ ಸುಖಕರವಾಗಲಿದೆ ಎಂದು ರಾಷ್ಟೀಯ ಈಡಿಗ ಮಹಾಮಂಡಳಿಯ ತಾಲೂಕು ಅಧ್ಯಕ್ಷ ಡಿ.ಜಿ. ನಾಯ್ಕ ಹೇಳಿದರು.

ಪಟ್ಟಣದ ಡಾ. ದಿನಕರ ದೇಸಾಯಿ ಸ್ಮಾರಕ ಭವನದಲ್ಲಿ ಹಮ್ಮಿಕೊಂಡ ಥಕ್ಕರಬಾಪಾ ಪೂರ್ವ ಪ್ರಾಥಮಿಕ ಶಾಲೆಗೆ ಈಡಿಗ ಮಹಾಮಂಡಳಿಯಿoದ 15 ಸಾವಿರ ರೂ. ಮೌಲ್ಯದ ಆಟಿಕೆ ಮತ್ತು ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಮಕ್ಕಳು ಚಿಕ್ಕ ವಯಸ್ಸಿನಲ್ಲಿರುವಾಗಲೇ ಅವರಿಗೆ ಸಂಸ್ಕಾರ, ನಮ್ಮ ಆಚಾರ-ವಿಚಾರಗಳನ್ನು ಕಲಿಸಬೇಕು. ನಂತರ ಅವರನ್ನು ತಿದ್ದಲು ಕಷ್ಟವಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಪಾಲಕರು ಮತ್ತು ಶಿಕ್ಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಕಾಳಜಿಯನ್ನು ವಹಿಸಬೇಕು. ಹಾಗಾದಾಗ ಮಾತ್ರ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ ದಿನಕರ ದೇಸಾಯಿ ಸಮೂಹ ಸಂಸ್ಥೆಯ ಸಂಯೋಜಕ ಚಂದ್ರಶೇಖರ ಕಡೆಮನಿ ಮಾತನಾಡಿ, ನಮ್ಮ ವಿದ್ಯಾರ್ಥಿಗಳಿಗೆ ಆಟಿಕೆ ಮತ್ತು ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿದ ರಾಷ್ಟೀಯ ಈಡಿಗ ಮಹಾಮಂಡಳಿಗೆ ಧನ್ಯವಾದಗಳು. ಒಂದು ಶಿಕ್ಷಣ ಸಂಸ್ಥೆ ಅಥವಾ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಸಂಘಟನೆಗಳ ಪಾತ್ರ ಅತ್ಯಂತ ಮಹತ್ವವಾದದ್ದು ಎಂದರು.

ಈ ಸಂದರ್ಭದಲ್ಲಿ ರಾಷ್ಟೀಯ ಈಡಿಗ ಮಹಾಮಂಡಳಿಯ ಗೌರವಾಧ್ಯಕ್ಷ ಮಾದೇವ ಎಂ. ನಾಯ್ಕ, ಯುವ ಅಧ್ಯಕ್ಷ ಮಂಜುನಾಥ ಕೆ. ನಾಯ್ಕ, ಉಪಾಧ್ಯಕ್ಷರಾದ ರಮೇಶ ಎಸ್. ನಾಯ್ಕ, ಉಮೇಶ ಎನ್. ನಾಯ್ಕ, ಸಂಜಯ ಆರ್. ನಾಯ್ಕ, ಖಜಾಂಚಿ ಶ್ರೀಪಾದ ಟಿ. ನಾಯ್ಕ, ಕಾರ್ಯದರ್ಶಿ ವಸಂತ ವಿ. ನಾಯ್ಕ, ಮಹಿಳಾ ತಾಲೂಕು ಅಧ್ಯಕ್ಷೆ ಲೀಲಾವತಿ ಬಿ. ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕೊಂಡಳ್ಳಿ, ಜಿಲ್ಲಾ ನಿರ್ದೇಶಕ ರಮೇಶ ಎನ್. ನಾಯ್ಕ, ರಾಜ್ಯ ಕಾರ್ಯದರ್ಶಿ ಉಲ್ಲಾಸ ನಾಯ್ಕ ಮೊರಳ್ಳಿ, ಥಕ್ಕರ್‌ಬಾಪಾ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಸುನಿತಾ ಅರ್ಗೇಕರ ಉಪಸ್ಥಿತರಿದ್ದರು.

ಪ್ರಾರ್ಥನಾ ಸಂಗಡಿಗರು ಪ್ರಾರ್ಥಿಸಿದರು. ಡಾ. ದಿನಕರ ದೇಸಾಯಿ ಸ್ಮಾರಕ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಸುಭಾಷ ಕೆ. ನಾಯ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಜಗುಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ದೀಪಾ ವಿ. ನಾಯ್ಕ ನಿರ್ವಹಸಿದರು. ಮಹಿಳಾ ಜಿಲ್ಲಾಧ್ಯಕ್ಷೆ ಮಂಜುಳಾ ನಾಯ್ಕ ವಂದಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version