Big News
Trending

Arecanut : ರೈತರಿಗೆ ಆಪ್ತಸ್ನೇಹಿತನಾಗುತ್ತಿರುವ ಫೈಬರ್ ದೋಟಿ: ಹಣದ ಜೊತೆಗೂ ಸಮಯವೂ ಉಳಿತಾಯ

ಶಿರಸಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಬೆಳೆಯಾದ ಅಡಿಕೆ ಬೆಳೆಯುವ ರೈತರಿಗೆ ಕಾರ್ಬನ್ ಫೈಬರ್ ದೋಟಿ ಆಪ್ತ ಸ್ನೇಹಿತನಾಗಿ ಬೆಳೆಯತೋಡಗಿದ್ದು , ಕಾರ್ಬನ್ ಫೈಬರ್ ದೋಟಿ ಗೆ ಭರ್ಜರಿ ಡಿಮ್ಯಾಂಡ್ ಬರತೊಡಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕ ಬೆಳೆಯಾಗಿದ್ದ ಅಡಕೆ, ಈಗಾಗಲೆ ವಾಣಿಜ್ಯ ಬೆಳೆಯಾಗಿ ಎಲ್ಲೆಡೆ ವ್ಯಾಪಿಸಿದೆ. ಮಲೆನಾಡು, ಕರಾವಳಿ ಭಾಗವನ್ನು ಮೀರಿಸುವಂತೆ ಬಯಲು ಸೀಮೆಯಲ್ಲಿ ಅಡಕೆ ಬೆಳೆ ರೈತರ ಆಯ್ಕೆಯಾಗಿದೆ.

ಇದಕ್ಕೆ ಅಡಕೆಗೆ ಇತ್ತೀಚೆಗೆ ಸಿಗುತ್ತಿರುವ ದರವೂ ಕಾರಣ ಇರಬಹುದು. ಅಡಕೆ ಕೊಯ್ಲು, ಔಷಧ ಸಿಂಪಡಣೆ ವೇಳೆ ಕೂಲಿ ಸಮಸ್ಯೆ ಅಪಾರ ವಾಗಿರುತ್ತದೆ .ಎತ್ತರದ ಮರವೇರಿ ಅಡಕೆ ಗೊನೆ ಇಳಿಸುವ, ಔಷಧ ಸಿಂಪಡಣೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಈ ಸಮಸ್ಯೆ ನಿವಾರಣೆಗೆ ಕಾರ್ಬನ್ ಫೈಬರ್ ದೋಟಿ ಉತ್ತಮ ಸಾಧನ ವಾಗಿದೆ. ಈಗಾಗಲೆ ಮಲೆನಾಡು, ಕರಾವಳಿ ಭಾಗದಲ್ಲಿ ದೋಟಿ ಬಳಿಕೆ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಮೊದಲು ಬಯಲು ಸೀಮೆಯ ಪ್ರದೇಶದಲ್ಲಿ ಪ್ರಾರಂಭ ಗೊಂಡ ದೋಟಿ ಪ್ರಯೋಗವು ನಿಧಾನವಾಗಿ ಮಲೆನಾಡು ಭಾಗಕ್ಕೂ ಪ್ರವೇಶಿಸಿ ಈ ವರ್ಷ ದೊಟಿಯ ಸಹಾಯದಿಂದಲೇ ಶೇ 70 % ಅಡಿಕೆ ಬೆಳೆಗಾರರು ಔಷಧಿ ಸಿಂಪರಣೆ ಮಾಡಿರುವುದಾಗಿ ತಿಳಿದು ಬಂದಿದೆ.

ಫೈಬರ್ ದೋಟಿ ಸಹಾಯದಿಂದ ಅಡಿಕೆ ಗೊನೆಗಳಿಗೆ ಔಷಧಿ ಸಿಂಪರಣೆ ಮಾಡುವ ಕೆಲಸ ಬಹಳ ವೇಗವಾಗಿ ಆಗುತ್ತದೆ. ಮರಹತ್ತಿ ಸಿಂಪರಣೆ ಮಾಡಲು ತೆಗೆದುಕೊಳ್ಳುವ ಸಮಯಕ್ಕಿಂತ ದೊಟಿಯಲ್ಲಿ ಸಿಂಪರಣೆ ಮಾಡುವುದು ಬಹಳ ವೇಗವಾಗಿ ಮಾಡಬಹುದಾಗಿದೆ. ಅತೀ ಎತ್ತರದ ಮರದಲ್ಲಿರುವ ಅಡಿಕೆ ಗೊನೆಗೂ ದೊಟಿಯ ಸಹಾಯದಿಂದ ಸುಲಭವಾಗಿ ಔಷಧಿ ಸಿಂಪರಣೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಮರವೇರಿ ಔಷಧಿ ಸಿಂಪರಣೆ ಮಾಡುವಾಗ ಅಥವಾ ಅಡಿಕೆ ಕಟಾವು ಮಾಡುವ ಸಂದರ್ಭದಲ್ಲಿ ಮರದಿಂದ ಆಯತಪ್ಪಿ ಬಿದ್ದು ಸಾವನ್ನಪ್ಪುವ ಘಟನೆಗಳೀಂದ ಬಚಾವ್ ಆಗಲು ಫೈಬರ್ ದೋಟಿ ಬಹಳ ಅನುಕೂಲ ವಾಗಿದೆ.

ರೈತರು ಖರೀದಿಸುವ ಫೈಬರ್ ದೋಟಿ ಗೆ ತೋಟಗಾರಿಕೆ ಇಲಾಖೆ ಯಿಂದ ಸಹಾಯಧನ ಸಹ ಲಭ್ಯವಿದೆ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಕುರಿತು ಸರ್ಕಾರದ ಗಮನ ಸೆಳೆದು ಫೈಬರ್ ದೋಟಿ ಗೆ ಸಹಾಯ ಧನ ಬರುವಂತೆ ಮಾಡಿರುವುದು ಅಡಿಕೆ ಬೆಳೆಗಾರರು ಸಂತಸ ಪಡುವ ವಿಷಯವಾಗಿದೆ. ರೈತರು ಖರೀದಿಸುವ ಫೈಬರ್ ದೋಟಿ ಗೆ ತೋಟಗಾರಿಕೆ ಇಲಾಖೆ ಯಿಂದ ಸಹಾಯಧನ ಸಹ ಲಭ್ಯವಿದೆ. ಇದೇ ವೇಳೆ, ತಮ್ಮ ಸಂಘ ಸಂಸ್ಥೆಗಳಲ್ಲಿ ವ್ಯವಹರಿಸುತ್ತಿರುವ ಸದಸ್ಯರಿಗೆ ಸಹಕಾರಿ ಸಂಘಗಳು ಬಾಡಿಗೆ ರೂಪದಲ್ಲಿ ಫೈಬರ್ ದೋಟಿ ಪೂರೈಸಿ ಔಷಧಿ ಸಿಂಪರಣೆ ಗೆ ಹಾಕಿ ಅಡಿಕೆ ಕಟಾವು ಮಾಡಲು ಸಹಾಯ ಮಾಡಲಾಗುತ್ತಿದೆ. ಇದರಿಂದ ಫೈಬರ್ ದೋಟಿ ಯವರನ್ನು ಹುಡುಕುವ ಕೆಲಸವೂ ರೈತರಿಗೆ ಕಡಿಮೆ ಆದಂತಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button