Focus News
Trending

ಚಿಣ್ಣರ ಯಕ್ಷಗಾನ ರಂಗ ಪ್ರವೇಶ – ಎಸ್.ಕೆ.ಪಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ

ಸಾಧಕರಿಗೆ ಸಂದಿತು ಸನ್ಮಾನ

ಕುಮಟಾ: ಕತಗಾಲದ ನಾಟ್ಯ ಗಣಪತಿ ಯಕ್ಷಗಾನ ತರಬೇತಿ ಕೇಂದ್ರದ ಆಶ್ರಯದಲ್ಲಿ ಚಿಣ್ಣರ ಯಕ್ಷಗಾನ ರಂಗ ಪ್ರವೇಶ ಹಾಗೂ ಯಕ್ಷಗಾನ ಪ್ರದರ್ಶನ ಎಸ್.ಕೆ.ಪಿ ಪ್ರೌಢಶಾಲೆ ಕತಗಾಲದಲ್ಲಿ ನಡೆಯಿತು. ಗಜಾನನ ಪೈ ಚಂಡೆ ಬಾರಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾದ ಡಾ.ಜಿ.ಎಲ್ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಭಾಗವತರಾದ ಉಮೇಶ ಭಟ್ಟ ಬಾಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಿಮ್ಮಪ್ಪ ಭಟ್ಟ ಭಂಡಿವಾಳ, ಲೋಕೇಶ ನಾಯ್ಕ ಗುಣವಂತೆ ಅವರನ್ನು ಸನ್ಮಾನಿಸಲಾಯಿತು.. ವಿದ್ಯಾರ್ಥಿಗಳು ಗುರು ಕಾಣಿಕೆ ನೀಡಿದರು. ಶಿಕ್ಷಕರಾದ ವಿನಾಯಕ ಭಟ್ ಸ್ವಾಗತಿಸಿದರೆ, ದೈಹಿಕ ಶಿಕ್ಷಣ ಶಿಕ್ಷಕ ಜಿ.ಕೆ.ಗೌಡ ಕಾರ್ಯಕ್ರಮ ನಿರ್ವಹಿಸಿದರು.

ವಿಸ್ಮಯ ನ್ಯೂಸ್, ಕುಮಟಾ

Back to top button