Murudeshwar News: ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ“ವಿದ್ಯಾರ್ಥಿ ಪುಷ್ಠಿಕರಣದ ಕಾರ್ಯಗಾರ “
ಮುರ್ಡೇಶ್ವರ: ಪದವಿ ವಿದ್ಯಾರ್ಥಿಗಳಿಗೆ “ಸ್ಟೂಡೆಂಟ್ ಎನ್ ರಿಚ್ “ (ವಿದ್ಯಾರ್ಥಿ ಪುಷ್ಠಿಕರಣದ ಕಾರ್ಯಗಾರ ) ಪ್ರೊಗ್ರಾಮ್ನ್ನು ಹಮ್ಮಿಕೊಳ್ಳಲಾಯಿತು . ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಅರ್. ಎನ್.ಎಸ್ ಪ್ರಥಮ ದರ್ಜೆ ಕಾಲೇಜಿನ ಆಡಳಿತಾಧಿಕಾರಿಗಳು ಹಾಗೂ ಪ್ರಾಚಾರ್ಯರಾದ ದಿನೇಶ್ ಗಾಂವಕರ್ ರವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕೆ ಇಂತಹ ಕಾರ್ಯಗಾರ ಸಹಾಯಕವಾಗುವುದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು .
ಕಾರ್ಯಕ್ರಮದಲ್ಲಿ ಉದ್ಯೋಗ ನಿಯೋಜನಾಧಿಕಾರಿಗಳಾಗಿ ಆಗಮಿಸಿದ ಪ್ರೊ. ಮಧುಸೂದನ್ಅವರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ “ವಿದ್ಯಾರ್ಥಿಗಳು ತಮ್ಮ ಕೌಶಲ್ಯಾಭಿವೃದ್ಧಿ ಮತ್ತು ಉನ್ನತ ಶಿಕ್ಷಣ ಪಡೆಯಲು ಬೇಕಾದ ಮಾಹಿತಿ ಮತ್ತು ಸಲಹೆ ಪಡೆದುಕೊಳ್ಳಲು ಈ ಕಾರ್ಯಗಾರ ಸಹಕಾರಿ ಎಂದರು. ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರೊ. ಹೇಮಂತ್ ಕುಮಾರ್ ಸಹಾಯಕ ಪ್ರಾದ್ಯಾಪಕರು. P.E.S.I.T.M ಶಿವಮೊಗ್ಗ ಹಾಗೂ ಜೊಸ್ಲೀನ್ ಟಿ ಲೋಬೋ .ಅಸಿಸ್ಟೆಂಟ್ ಪ್ರೊ , ಸಮಾಜ ಸೇವಕರು ಇವರು ವಿದ್ಯಾರ್ಥಿಗಳಿಗೆ ಎರಡು ದಿನದ ಕಾರ್ಯಗಾರದಲ್ಲಿ ಉನ್ನತ ಶಿಕ್ಷಣದ ಮಹತ್ವ, P.G.C.T , M.B.A ಪದವಿ ತರಗತಿ ಪ್ರವೇಶ , ವ್ಯಕ್ತಿತ್ವ ವಿಕಸನ ಸಂವಹನ ವಿಷಯಗಳ ಬಗ್ಗೆ ಪೂರ್ಣ ಮಾಹಿತಿ ನೀಡಲಿದ್ದೇನೆ. ಇದರ ಪ್ರಯೋಜನ ಪಡೆಯಬೇಕೆಂದರು. ಕಾರ್ಯಕ್ರಮದಲ್ಲಿ ಸಂಯೋಜನಾಧಿಕಾರಿ ದೇವಕಿ ನಾಯ್ಕ, ಗಣೇಶ್ ನಾಯ್ಕ ಹಾಜರಿದ್ದರು.
ಕನ್ನಡ ಉಪನ್ಯಾಸಕರಾದ ಗಣಪತಿ ಕಾಯ್ಕಿಣಿ ಧನ್ಯವಾದ ಅರ್ಪಿಸಿ, ಉಪನ್ಯಾಸಕಿ ಸೋಫಿಯಾ ಫರ್ನಾಂಡಿಸ್ ನಿರೂಪಣೆ ಮಾಡಿ , ವಿದ್ಯಾರ್ಥಿನಿ ಕು. ದಿವ್ಯಾ ಮತ್ತು ಅಭಿಷಾ ರವರು ಪ್ರಾರ್ಥನೆ ಹಾಡಿದರು . ನಂತರ ವಿದ್ಯಾರ್ಥಿಗಳಿಗೆ ಕಾರ್ಯಗಾರ ನಡೆಯಿತು . ಕಾರ್ಯಗಾರದಲ್ಲಿ ಉಪನ್ಯಾಸಕ ವೃಂದದವರು ಹಾಜರಿದ್ದರು.
ವಿಸ್ಮಯ ನ್ಯೂಸ್, ಮುರ್ಡೇಶ್ವರ