ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್ಕೆ ವಿದ್ಯಾರ್ಥಿಗಳು, ತಾಲೂಕಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ಒಂಭತ್ತನೇ ವರ್ಗದ ವಿದ್ಯಾರ್ಥಿಗಳಾದ ಕುಮಾರಿ ಶ್ರೇಯಾ ಜಿ. ಹೆಬ್ಬಾರ ಇವಳು ಮಿರ್ಜಾನಿನ ಬಿಜಿಎಸ್ ಸೆಂಟ್ರಲ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ತಾಲೂಕಾ ಮಟ್ಟದ ಜಾನಪದಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಹಾಗೂ ಚದುರಂಗದಲ್ಲಿ ಕುಮಾರಿ ಸಿಂಚನಾ ಜಿ. ಭಟ್ಟ ಮತ್ತು ಕುಮಾರ ಪ್ರಣೀತ ವಿ. ಶೆಟ್ಟಿ ಇವರುಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪ್ರಥಮ ಬಹುಮಾನವು ರೂ.5,000/-, ಹಾಗೂ ದ್ವಿತೀಯ ಬಹುಮಾನವು ರೂ.3,000/- ನಗದಿನ ಜೊತೆ ಟ್ರೋಫಿ, ಪ್ರಶಸ್ತಿಪತ್ರವನ್ನೊಳಗೊಂಡಿವೆ.
ಅದೇ ರೀತಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ಇವರು ಪತ್ರಿಕಾ ದಿನಾಚರಣೆ 2023 ಅಂಗವಾಗಿ ಗಿಬ್ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ತಾಲೂಕಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಸಿವಿಎಸ್ಕೆಯ ಒಂಭತ್ತನೇ ವರ್ಗದ ಇನ್ನೋರ್ವ ವಿದ್ಯಾರ್ಥಿನಿ ಕುಮಾರಿ ಕೃತಿಕಾ ಮಹೇಶ ಭಟ್ಟ ಇವಳು ಪ್ರಥಮ ಸ್ಥಾನ ಗಳಿಸಿ ರೂ.3,000/- ನಗದು, ಟ್ರೋಫಿ ಹಾಗೂ ಪ್ರಶಸ್ತಿಪತ್ರವನ್ನು ತನ್ನದಾಗಿಸಿಕೊಂಡಿದ್ದಾಳೆ. ಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯ ಶಿಕ್ಷಕರು, ಪಾಲಕರು ಸಾಧಕರನ್ನು ಅಭಿನಂದಿಸಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ