ಮುರ್ಡೇಶ್ವರದಲ್ಲಿ ದೇವರ ದರ್ಶನ ಪಡೆದು ಸ್ನೇಹಿತರೊಂದಿಗೆ ಈಜಲು ತೆರಳಿದ ವೇಳೆ ದುರಂತ: ಓರ್ವ ನಾಪತ್ತೆ, ಇನ್ನೊರ್ವನ ರಕ್ಷಣೆ

ಸಮುದ್ರದಲ್ಲಿ ಈಜಲು ತೆರಳುವ ಮುನ್ನ ಇರಲಿ ಎಚ್ಚರ

ಭಟ್ಕಳ: ವಿಶ್ವಪ್ರಸಿದ್ಧ ಪ್ರವಾಸಿತಾಣವಾದ ಮುರುಡೇಶ್ವರ ಪ್ರವಾಸಕ್ಕೆ ಬಂದ ಪ್ರವಾಸಿಗರಿಬ್ಬರು ಸಮುದ್ರದ ಅಲೆಗೆ ಕೊಚ್ಚಿ ಹೋದ ಘಟನೆ ನಡೆದಿದೆ. ಇದರಲ್ಲಿ ಓರ್ವವನ್ನು ರಕ್ಷಣೆ ಮಾಡಲಾಗಿದೆ. ಆದರೆ, ಇನ್ನೋರ್ವ ಕಾಣಿಯಾಗಿರುವ ಘಟನೆ ಇಲ್ಲಿನ ಸಮುದ್ರ ತೀರದಲ್ಲಿ ನಡೆದಿದೆ. 22 ಮಂದಿ ಸ್ನೇಹಿತರೊಂದಿಗೆ ಕೋಲಾರದಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು. ದೇವರ ದರ್ಶನದ ಬಳಿಕ ಎಲ್ಲಾ ಸ್ನೇಹಿತರು ಸಮುದ್ರದಲ್ಲಿ ಈಜಲು ತೆರಳಿದ್ದು, ಈ ದುರ್ಘಟನೆ ಸಂಭವಿಸಿದೆ.

ಕಾಣಿಯಾದ ಪ್ರವಾಸಿಗರನ್ನು ಮಣಿತೇಜಾ(21) ಹಾಗೂ ರಕ್ಷಣೆಯಾದವನ್ನು ಯಶ್ ಎಂದು ತಿಳಿದುಬಂದಿದೆ. ಸಮುದ್ರಕ್ಕೆ ಇಳಿಯಲು ನಿರ್ಬಂಧ ಇದ್ದರು ಕೂಡ ಪ್ರವಾಸಿಗರು ನೀರಿಗೆ ಇಳಿದಿದ್ದಾರೆ. ಈ ವೇಳೆ ಇಬ್ಬರು ಯುವಕರು ನೀರಿನಲ್ಲಿ ಕೊಚ್ಚಿಹೋಗಿದ್ದು, ತಕ್ಷಣ ಅಲ್ಲಿದ್ದ ರಕ್ಷಕರು ಯುವಕರನ್ನು ರಕ್ಷಣೆ ಮಾಡಲು ಮುಂದಾದ ವೇಳೆ ಓರ್ವ ಯುವಕನನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಗಿದ್ದು, ಇನ್ನೋರ್ವ ಯುವಕ ನಾಪತ್ತೆಯಾಗಿದ್ದಾನೆ. ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version