Focus News
Trending

ಅಂಕೋಲಾ ತಹಶೀಲ್ದಾರ್ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಹವ್ಯಕ ಸಂಘ

ಅಂಕೋಲಾ : ರಾಜ್ಯ ವಿಧಾನಸಭೆಯ ಚುನಾವಣೆ ನೀತಿ ಸಂಹಿತೆ ಸಂದರ್ಭದಲ್ಲಿ ತಾಲೂಕಿನ ತಹಶೀಲ್ದಾರ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದ ಪ್ರವೀಣ್ ಹುಚ್ಚಣ್ಣನವರ್, ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರೀಕ್ಷೆಯಂತೆಯೇ ವರ್ಗಾವಣೆಗೊಂಡಿದ್ದು,ಅಂಕೋಲಾದಲ್ಲಿ ತೆರವಾದ ಅವರ ಸ್ಥಾನಕ್ಕೆ, ಅಶೋಕ ಭಟ್ಟ ಅವರು ಹೆಚ್ಚುವರಿ ಪ್ರಭಾರ ಹುದ್ದೆ ವಹಿಸಿಕೊಂಡಿದ್ದಾರೆ. ಅಂಕೋಲಾದ ನೂತನ ತಹಶೀಲ್ದಾರ ಅಶೋಕ ಭಟ್ಟ ಅವರನ್ನು ಅಂಕೋಲಾ ತಾಲೂಕಾ ಹವ್ಯಕ ಸಂಘದ ವತಿಯಿಂದ, ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿ ಸ್ವಾಗತಿಸಲಾಯಿತು.

ಈ ವೇಳೆ ಮಾತನಾಡಿದ ತಹಶೀಲ್ದಾರ ಅಶೋಕ ಭಟ್ಟ ಅವರು, ತನ್ನ ಬಾಲ್ಯದ ದಿನಗಳ ನೆನಪಿನ ಬುತ್ತಿ ಬಿಚ್ಚಿಟ್ಟು, ಹಳವಳ್ಳಿಯಲ್ಲಿ ಕಾರ್ಯದರ್ಶಿಯಾಗಿ ತನ್ನ ತಂದೆ ಸೇವೆ ಸಲ್ಲಿಸಿದ್ದನ್ನು ನೆನಪಿಸಿಕೊಂಡರು. ಹವ್ಯಕ ಸಂಘದ ಅಧ್ಯಕ್ಷರಾದ ಹಿರಿಯ ವಕೀಲ ಎಂ ಪಿ ಭಟ್ಟ, ಪ್ರಧಾನ ಕಾರ್ಯದರ್ಶಿ ವಿ‌ ಬಿ ಭಟ್ಟ ಪ್ರಮುಖರಾದ ಗಣಪತಿ ಭಟ್ಟ, ರ ಸೇರಿದಂತೆ ಹವ್ಯಕ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು ನೂತನ ತಹಶೀಲ್ದಾರ ಅಶೋಕ್ ಭಟ್ಟ ಅವರಿಗೆ ಸ್ವಾಗತಿಸಿ ಶುಭ ಕೋರಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button