Big News
Trending

ಆಗಸ್ಟ್ 20 ರಂದು ಕುಮಟಾದಲ್ಲಿ ಕೊಂಕಣಿ ಮಾನ್ಯತಾ ದಿವಸ ಆಚರಣೆ

ಕೊಂಕಣಿ ಭಾಷಿಕ ವಿವಿಧ ಸಮಾಜದವರಿಂದ ವಿಧಾನ ಪರಿಷತ್ ನ ನೂತನ ಸದಸ್ಯ ಶ್ರೀ ಶಾಂತರಾಮ ಸಿದ್ಧಿ ಅವರಿಗೆ ಸನ್ಮಾನ

ಕುಮಟಾ: ಕೊಂಕಣಿ ಭಾಷೆಗೆ ಸಂವಿಧಾನಬದ್ಧ ಮಾನ್ಯತೆ ದೊರೆತ ದಿನವಾದ ಅಗಷ್ಟ ೨೦ ರಂದು ಗುರುವಾರ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕುಮಟಾದ ಕೊಂಕಣಿಪರಿಷದ್ ರವರು ಸಯುಂಕ್ತವಾಗಿ ಕೊಂಕಣಿ ಮಾನ್ಯತಾ ದಿವಸವನ್ನು ಆಚರಿಸಲಿದ್ದು ಕುಮಟಾದ ನಾದಶ್ರೀಕಲಾ ಕೇಂದ್ರದ ಸಭಾಭವನದಲ್ಲಿ ಮುಂಜಾನೆ ಹನ್ನೊಂದು ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಯವರು ಉದ್ಘಾಟಿಸಲಿದ್ದಾರೆ.ನೂತನವಾಗಿ ವಿಧಾನಪರಿಷತ್ತಿಗೆ ನೇಮಕವಾಗಿರುವ ಶಾಸಕ ಶ್ರೀ ಶಾಂತಾರಾಮ ಸಿದ್ಧಿಯವರು ,ಹನ್ಮಾವ ಚರ್ಚನ ಧರ್ಮಗುರು ಜೋನ್ ರೊಡ್ರಗೀಸ್ ರೋಟರಿ ಕ್ಲಬ್ ಕುಮಟಾದ ಅಧ್ಯಕ್ಷ ಶ್ರೀ ಶಶಿಕಾಂತ ಕೋಳೇಕರ ಸಮಾಜಸೇವಕ ಶ್ರೀ ಎಂ ಬಿ ಪೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಕೋವಿಡ್ ನಿಯಮಾನುಸಾರ ಸರಳವಾಗಿ ಆಚರಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕಣಿ ಪರಿಷದ್ ಕುಮಟಾ ಇದರ ಅಧ್ಯಕ್ಷ ಶ್ರೀಅರುಣ ಉಭಯ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಕೊಂಕಣಿ ಸಮುದಾಯದ ಪರವಾಗಿ ವಿಧಾನಪರಿಷತ್ ಸದಸ್ಯ ಶ್ರೀ ಶಾಂತಾರಾಮ ಸಿದ್ಧಿಯವರನ್ನು ಸನ್ಮಾನಿಸಲಾಗುವುದು ಎಂದು ಅಕಾಡೆಮಿ ಸದಸ್ಯ ಚಿದಾನಂದ ಭಂಡಾರಿ ಇವರು ಪತ್ರಿಕೆಗೆ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ಕುಮಟಾ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬಂಧ ತೋರಿಸಲಾಗುವುದು
ಎರಡನೇಯ ಸಂಬಂಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button