ತಂಡ್ರಕುಳಿಯ ಭಾಗದಲ್ಲಿ ಮತ್ತೆ ಅಲ್ಲಲ್ಲಿ ಕುಸಿಯುತ್ತಿರುವ ಗುಡ್ಡ
ಇನ್ನೂ ಮಾಸಿಲ್ಲ ದುರ್ಘಟನೆ
ಕುಮಟಾ: ತಾಲೂಕಿನ ತಂಡ್ರಕುಳಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಗುಡ್ಡ ಕುಸಿದು ಪ್ರಾಣ ಹಾನಿ, ಗಾಯಗೊಂಡ ಬಗೆ ಹಾಗೂ ಇನ್ನಿತರ ಹಾನಿಯನ್ನು ಮರೆಯುತ್ತಿರುವಾಗಲೇ ಪುನ ಪುನಃ ಮಳೆಗಾಲ ಬಂದಾಗಲೆಲ್ಲ ಇದರ ಕಹಿ ನೆನಪು ಬರುವುದರ ಜೊತೆ ಜೊತೆಗೇ ಒಂದಲ್ಲ ಒಂದು ದುರ್ಘಟನೆ ಪ್ರತಿವರ್ಷ ಸಂಭವಿಸುತ್ತಲೇ ಇರುವುದನ್ನು ಕಾಣುತ್ತಿದ್ದೇವೆ. ಇದೀಗ ಹಿಂದಿನ ಗುಡ್ಡ ಕುಸಿತದ ಜಾಗದ ನೂರು ಮೀಟರ ಅಂತರದಲ್ಲೇ ಇಂದು ಗುಡ್ಡ ಕುಸಿದು ಕುಮಟಾ ಕಡೆಗೆ ಬರುವ ರಸ್ತೆ ಸಂಪೂರ್ಣ ಬ್ಲಾಕ್ ಆಗಿದ್ದಲ್ಲದೇ ಇನ್ನೊಂದು ರಸ್ತೆಗೆ ಹರಡುವಷ್ಟರಲ್ಲಿ ಐಆರ್‌ಬಿ ತಂಡ ಕಾರ್ಯಪ್ರವೃತ್ತರಾಗಿ ಮುಂದಿನ ತೊಂದರೆಯನ್ನು ತಪ್ಪಿಸಿದ್ದಾರೆ. ಈ ವೇಳೆ ಪೋಲೀಸರು ಬಂದು ವಾಹನಗಳು ಜಾಗರೂಕತೆಯಿಂದ ಓಡಾಡಲು ಸಹಕರಿಸಿದರು.
ಇನ್ನು ಪ್ರತಿವರ್ಷ ಮಳೆಗಾಲದಲ್ಲಿ ಈ ಗುಡ್ಡ ಕುಸಿವನ್ನು ತಪ್ಪಿಸುವುದಕ್ಕಾಗಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ವಿಶೇಷ ತಾಂತ್ರಿಕತೆಯನ್ನು ಬಳಸಿ ಜನತೆ ನಿಟ್ಟುಸಿರು ಬಿಡುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ ಸ್ಥಳೀಯರಾದ ಆರ್ ಕೆ ಅಂಬಿಗ, ಸದಾ ಒಂದಿಲ್ಲೊAದು ಆತಂಕವನ್ನು ಎದುರಿಸುತ್ತ ಬಂದಿರುವ ತಂಡ್ರಕುಳಿ ಗ್ರಾಮಸ್ಥರಿಗೆ ಬಹುದಿನಗಳ ಬೇಡಿಕೆಯಾದ ಪರ್ಯಾಯ ಸ್ಥಳದ ಅವಕಾಶವನ್ನು ಅತಿಶೀಘ್ರವಾಗಿ ಕಲ್ಪಿಸಿಕೊಡಬೇಕಾಗಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಐಆರ್ ಬಿ ಯೋಜನಾಧಿಕಾರಿ ಶ್ರೀನಿವಾಸ ಹಾಗೂ ಸ್ಥಳೀಯರಾದ ರಾಘವೇಂದ್ರ ಆರ್ ದೇಶಭಂಡಾರಿ, ವಿನಾಯಕ ಉತ್ತಮ ದೇಶಭಂಡಾರಿ ಇನ್ನಿತರರು ಉಪಸ್ಥಿತರಿದ್ದು ಸಹಕರಿಸಿದರು.
ಮತ್ತೆ ಮೈ ತುಂಬಿಕೊಳ್ಳುತ್ತಿರುವ ಅಘನಾಶಿನಿ:
ಕಳೆದ ಮರ‍್ನಾಲ್ಕು ದಿನಗಳ ಹಿಂದೆಯಷ್ಟೇ ಸುಮಾರಷ್ಟು ಉಕ್ಕಿ ಶಾಂತವಾಗಿದ್ದ ಅಘನಾಶಿನಿ ಇದೀಗ ಪುನಃ ಮೂರು ದಿನಗಳಿಂದ ರಭಸವಾಗಿ ಸುರಿಯುತ್ತಿರುವ ಮಳೆಯಿಂದ ಇಂದು ಮೈ ತುಂಬಿಕೊಳ್ಳುತ್ತಿದೆ. ದೀವಗಿ ಭಾಗದಲ್ಲಿ ಕಳೆದ ನೆರೆ ಸಂದರ್ಭದಲ್ಲಿ ಸಾಯಂಕಾಲದ ವೇಳೆ ಕೆಳಗಿನಕೇರಿಯ ನದಿಗುಂಟ ವಾಸಿಸುತ್ತಿದ್ದ ನಿವಾಸಿಗಳಲ್ಲಿ ವಯೋವೃದ್ಧರು, ಮಕ್ಕಳು, ಅನಾರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಎತ್ತರದ ಪ್ರದೇಶದ ಸಂಬಂಧಿಕರ ಮನೆಗಳಲ್ಲಿ ವಾಸ್ತವ್ಯ ಮಾಡಿ ನೆರೆ ಇಳಿದ ನಂತರ ಹಿಂದಿರುಗಿದ್ದರು. ಇದೀಗ ಪುನಃ ನೀರು ಏರುತ್ತಿರುವುದರಿಂದ ಮತ್ತೆ ಜನತೆ ಆತಂಕದಲ್ಲಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಆರ್ ಕೆ ಅಂಬಿಗ ತಿಳಿಸಿದ್ದಾರೆ.
ನೆರೆಯ ಸ್ಥಿತಿಗತಿಯನ್ನು ಅರಿತುಕೊಳ್ಳುವುದಕ್ಕಾಗಿ ಸ್ಥಳಕ್ಕೆ ಮಾನ್ಯ ಶಾಸಕರಾದ ದಿನಕರ ಕೆ ಶೆಟ್ಟಿ ಭೇಟಿ ನೀಡಿ ಜನತೆಯಲ್ಲಿ ಧೈರ್ಯ ತುಂಬಿ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ತಾಲೂಕಾಡಳಿತ ಸಿದ್ಧವಿದೆ ಅಂತಲೂ ತಿಳಿಸಿದರು. ಈ ಸಂದರ್ಭದಲ್ಲಿ ತಹಸೀಲದಾರರು, ಜಿ. ಪಂ. ಸ ಕಾ ಇಂಜಿನೀಯರರು ಜೊತೆಯಲ್ಲಿದ್ದರು. ಸ್ಥಳೀಯರಾದ ಗಂಗಾಧರ ಅಂಬಿಗ, ಶಿವಾನಂದ ಅಂಬಿಗ ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಕುಮಟಾ
ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.