Cyber Crime: ಬೆತ್ತಲೆ ನೋಟದಾಸೆಗೆ ಬೆತ್ತಲಾಯಿತೇ ಡಾಕ್ಟರ್ ವ್ಯಕ್ತಿತ್ವ? ಮಾಯಾ ಕನ್ನಡಕ ಖರೀದಿ ತೆವಲಿನಲ್ಲಿ ಯಡವಟ್ಟು

ನೆಟ್ ಫಿಶಿಂಗ್ ಗಾಳದಲ್ಲಿ ಸಿಕ್ಕಿ ಚಡಪಡಿಸಿದ ಪ್ರಭಾವಿ ರಾಜಕೀಯ ಮುಖಂಡನ ಸಂಬಂಧಿ ಯಾರು ?

ಅಂಕೋಲಾ : ಇತ್ತೀಚಿನ ಕೆಲ ಆಧುನಿಕ ತಂತ್ರಜ್ಞಾನಗಳು ಜನ ಜೀವನದ ಮೇಲೆ ಘಾಡ ಪ್ರಭಾವ ಬೀರುತ್ತಿರುವ ನಡುವೆಯೇ, ಸಾಮಾಜಿಕ ಜಾಲತಾಣಗಳ ದುರುಪಯೋಗ, ಆನ್ ಲೈನ್ ಶಾಪಿಂಗ್ ವಂಚನೆ ( cyber crime) ಮತ್ತಿತರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದೆಲ್ಲಿಯೋ ಕಾಣದ ಸ್ಥಳದಲ್ಲಿ ಕುಳಿತು, ನೆಟ್ ಫಿಶಿಂಗ್ ರೀತಿಯಲ್ಲಿ ನಾನಾ ರೀತಿಯ ಗಾಳ ಎಸೆದು ಚಿಕ್ಕ ಪುಟ್ಟ ಮೀನುಗಳಿಂದ ಹಿಡಿದು ಬೃಹತ್ತ ಗಾತ್ರದ ತಿಮಿಂಗಲಗಳನ್ನೂ ಕುಣಿಕೆಗೆ ಸಿಕ್ಕಿಸಲು ಸಂಚು ರೂಪಿಸುವ ಖದೀಮರು ಈ ಮೊದಲು ಎಟಿಎಂ ನವೀಕರಣ, ಮತ್ತಿತರ ರೀತಿಯಲ್ಲಿ ಬ್ಯಾಂಕ್ ಮೆನೇಜರ್ ಅಥವಾ ಸ್ಟಾಪ್ ಎಂದು ಹೇಳಿಕೊಂಡು ಒಟಿಪಿ ಪಡೆದು ಹಲವರನ್ನು ವಂಚಿಸಿದ್ದಿದೆ.

ಇದನ್ನೂ ಓದಿ: ಇಲ್ಲಿದೆ ಉದ್ಯೋಗಾವಕಾಶ: ವಿದ್ಯಾರ್ಹತೆ SSLC, ITI: 63 ಹುದ್ದೆಗಳ ನೇಮಕಾತಿ: 90 ಸಾವಿರ ವೇತನ

ಬರ ಬರುತ್ತಾ ಸಾರ್ವಜನಿಕರನೇಕರು ಜಾಗೃತರಾದರೆ, ಕಳ್ಳರು ಮತ್ತು ಒಂದು ಹೆಜ್ಜೆ ಮುಂದೆ ಹೋಗಿ ಕರೋನಾ ವ್ಯಾಕ್ಸಿನ್ ಮಾಹಿತಿ ಮತ್ತಿತರ ಹೆಸರಲ್ಲಿ ಕಾಲಕ್ಕೆ ತಕ್ಕಂತೆ ಸುಳ್ಳನ್ನೇ ಸರಿ ಎಂದು ನಂಬಿಸಿ ಹಲವರಿಗೆ ಮೋಸ ಮಾಡಿದ್ದಿದೆ. ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಹಿಡಿದು ಇತ್ತೀಚಿನ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಕೆಲವು ನಕಲಿ ಆ್ಯಪ್ ಖಾತೆ ತೆರೆದು , ವಂಚಿಸುವ ಜಾಲದ ಪ್ರಯತ್ನಗಳ ಕುರಿತು ಅಲ್ಲಲ್ಲಿ ಸುದ್ದಿ ಕೇಳಿ ಬಂದಿತ್ತು.

ಇಲ್ಲಿ ಸಾರ್ವಜನಿಕರು ಮತ್ತು ಕೆಲ ರೀತಿಯ ಗ್ರಾಹಕರಿಗಿರುವ ಮಾಹಿತಿ ಕೊರತೆ, ಅಸಾಹಯಕತೆಯನ್ನೇ ಬಂಡವಾಳ ಮಾಡಿಕೊಂಡು ವಂಚಿಸುವ ಹಲವು ಜಾಲಗಳಿವೆ. ಇನ್ನು ಕೆಲವೆಡೆ ಹೆಚ್ಚುತ್ತಿರುವ ಕೊಳ್ಳುಬಾಕ ಸಂಸ್ಕೃತಿಯಿಂದ ಮನೆಯಲ್ಲಿಯೇ ಕುಳಿತು ಆನ್ ಲೈನ್ ಆರ್ಡರ್ ಮಾಡಿದರೆ ಆಹಾರ, ಔಷಧ, ಬಟ್ಟೆ, ಬರೆ, ವಯಸ್ಸಿಗೆ ತಕ್ಕಂತೆ ಬೇಕಾದದ್ದು, ಬೇಡವಾದದ್ದೂ ಎಲ್ಲವೂ ಮನೆ ಬಾಗಿಲಿಗೆ ಬಂದು ಬೀಳುತ್ತದೆ. ರೊಕ್ಕವೊಂದಿದ್ದರೆ ಪ್ರಪಂಚವೇ ಅಂಗೈಯಲ್ಲಿ ಆಗುವಂತಾಗಿದೆ ಇಂದಿನ ಆಧುನಿಕ ಜಮಾನಾ. ಇದನ್ನೇ ಬಳಸಿಕೊಂಡು ಕೆಲವರು ತಮ್ಮ ಫ್ಯಾಶನ್ – ಪ್ರತಿಷ್ಠೆಗಾಗಿ ಏನೇನೋ ಆರ್ಡರ್ ಮಾಡುತ್ತಿರುತ್ತಾರೆ.

Cyber Crime: ಮಾಯಾ ಕನ್ನಡಕ ಖರೀದಿಸಿದ ಡಾಕ್ಟರ್!

ಆದರೆ ಅಂಕೋಲಾ ತಾಲೂಕಿನಲ್ಲಿ ವಾಸಿಸುತ್ತಿರುವ ವೈದ್ಯ ಮಹಾಶಯನೊಬ್ಬ ಮಾಯಾ ಕನ್ನಡಕ ಖರೀದಿಸಿ, ಯಾರಿಗೂ ತಿಳಿಯದಂತೆ ಬೆತ್ತಲ ಪ್ರಪಂಚ ನೋಡುವ ತೆವಲಿನಲ್ಲಿ, ಏನೋ ಮಾಡಲು ಹೋಗಿ ಏನೋ ಯಡವಟ್ಟು ಮಾಡಿಕೊಂಡು ಲಕ್ಷಾಂತರ ರೂ ಹಣ ಕಳೆದುಕೊಂಡದ್ದಲ್ಲವೇ, ಪ್ರಪಂಚದ ಮುಂದೆ ತನ್ನ ಮಾನ ಮರ್ಯಾದೆ ಕಳೆದು ಕೊಂಡು ಬೆತ್ತಲಾದನೇ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.

ಈ ಹಿಂದೆ ತಾಲೂಕಿನ ಹಲವು ಜನರ ಆರೋಗ್ಯ ಕಾಪಾಡುವ ಜವಾಬ್ದಾರಿಯಲ್ಲಿ ಪ್ರಭಾರಿಯಾಗಿದ್ದ ಎನ್ನಲಾದ ಅಧಿಕಾರಿ ವೈದ್ಯ, ಈಗ ಮೂಲಸ್ಥಾನಕ್ಕೆ ಮರಳಿದ್ದಾನೆ ಎನ್ನಲಾಗಿದ್ದು ಆತನೇ, ಆನ್ ಲೈನ್ ಶಾಪಿಂಗ್ ನಲ್ಲಿ ಅದೇನೋ ಖರೀದಿಸಲು ಹೋಗಿ ಈಗ ವಂಚನೆಗೊಳಗಾಗಿ ಸುದ್ದಿಯಾಗುವಂತಾಗಿದ್ದಾನೆ ಎನ್ನಲಾಗಿದ್ದು, ಆತ ಮರ್ಯಾದೆಗೆ ಅಂಜಿ ಇಲ್ಲವೇ ಇತರೇ ಕಾರಣಗಳಿಂದ ಸಿ. ಇ ಎನ್ (ಸೈಬರ್ ಕ್ರ್ರೆಂ ಪೊಲೀಸ್ ಠಾಣೆಗೆ cyber crime) ಪ್ರಕರಣ ದಾಖಲಿಸದೇ ಸುಮ್ಮನಾಗಿರುವುದು, ಆತನ ಗುಪ್ತ ರೋಗಕ್ಕೆ ಮದ್ದು ಇಲ್ಲದಂತಾಗಿದೆ. ಆದರೂ ಆತ ಮುಚ್ಚಿಟ್ಟ ರೋಗಕ್ಕೆ ಕೆಲವರು ತಮ್ಮ ಬಳಿ ಇರುವ ಚುಚ್ಚುಮದ್ದು ನೀಡಿದ್ದಾರೆ.

ಆತ ಯಾರೆನ್ನುವುದಕ್ಕಿಂತ ಮುಖ್ಯವಾಗಿ ಆತ ಈ ಹಿಂದೆ ರಾಜ್ಯವಾಳಿದ ಪ್ರಭಾವಿ ರಾಜಕೀಯ ಮುಖಂಡರೋರ್ವರ ಬೀಗತನದ ಮೂಲಕ ಎಲ್ಲೆಡೆ ಹೇಳಿಕೊಂಡು ಬೀಗುತ್ತಿದ್ದ ಎನ್ನುವುದು ಸಾರ್ವಜನಿಕ ವಲಯದಿಂದ ಹಲವು ಚರ್ಚೆಗೆ ಕಾರಣವಾದಂತಿದೆ. ಜನ ಸಾಮಾನ್ಯನೇ ಇರಲಿ, ದೊಡ್ಡ ಹುದ್ದೆಯವನೇ ಇರಲಿ, ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿ ವರೆಗೆ ಮೋಸ ಮಾಡುವವರು ಇರುತ್ತಾರೆ ಎನ್ನುವುದು ಈ ಹಿಂದಿನ ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ಆದರೆ ಮತಿಹೀನ ಡಾಕ್ಟರ್ ಮಾತ್ರ ಕಣ್ಣಿಗೆ ಕಾಣದ ಕಳ್ಳರಿಂದ ಮಾಯಾ ಕನ್ನಡಕ ಖರೀದಿಸಲು ಹೋಗಿ, ಡಿಸ್ಕೌಂಟ್ ಆಶೆಗೂ ಮರುಳಾಗಿ ಥಟ್ಟನೆ ಮತ್ತಷ್ಟು ಹಣ ಸುರಿದು,ಆಸೆ ಕಣ್ಣುಗಳಿಂದ ಕಾಯುತ್ತಿದ್ದವ,ತಾನು ಕಣ್ಣಿದ್ದೂ ಕುರುಡಾಗಿ ವಂಚನೆಗೊಳಗಾದ ವಿಷಯ ತಿಳಿದು ಕೊಳ್ಳುವಷ್ಟರಲ್ಲಿ , ಆತ ಹಣ ಕಳೆದುಕೊಂಡಿದ್ದಷ್ಟೇ ಅಲ್ಲದೆ ಮಾನಮರ್ಯಾದೆಯನ್ನು ಕಳೆದುಕೊಂಡು ಪರಿತಪಿಸುವಂತಾಗಿದೆ.

ಆದರೂ ಆತ ಅದನ್ನು ತೋರ್ಪಡಿಸದೇ ಮೇಲ್ನೋಟಕ್ಕೆ ತಾನವನಲ್ಲ ತಾನವನಲ್ಲ ಎಂಬಂತಿದ್ದಾನೆ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದು,ಈ ಘಟನೆಯ ಕುರಿತಂತೆ ಸತ್ಯಾ ಸತ್ಯತೆಗಳು ಅದೇನೇ ಇದ್ದರೂ, ಆನ್ ಲೈನ್ ನ ನಾನಾ ವಂಚನೆ ಪ್ರಕರಣಗಳಿಂದ ಸಾರ್ವಜನಿಕರೇ ಸ್ವತಃ ಎಚ್ಚರವಾಗಿದ್ದು, ಸೈಬರ್ cyber crime) ವಂಚಕರಿಂದ, ವಂಚನೆಗೊಳಗಾಗದಂತೆ ಜಾಗೃತಿ ವಹಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version