Follow Us On

Google News
Focus News
Trending

Kumta News: ಹಾಳುಕೊಂಪೆಯಂತಾಗಿದೆ ಹಿಂದೂ ರುದ್ರಭೂಮಿ:

ಎಲ್ಲೆಡೆ ಆವರಿಸಿದೆ ಪ್ಲಾಸ್ಟಿಕ್ ತ್ಯಜ್ಯ, ಗಿಡಗಂಟಿಳು

ಕುಮಟಾ: ಪುರಸಭಾ ವ್ಯಾಪ್ತಿಗೆ ಒಳಪಡುವ ಕುಮಟಾ ಪಟ್ಣಣದ ಮಣಕಿ ಮೈದಾನದ ಹಿಂಬಾಗದಲ್ಲಿರುವ ಹಿಂದೂ ರುದ್ರಭೂಮಿಯು ಸಂಪೂರ್ಣವಾಗಿ ಪ್ಲಾಸ್ಟಿಕ್ ತ್ಯಜ್ಯ, ಗಿಡ ಗಂಟಿ ಮುಂತಾದವುಗಳಿoದ ತುಂಬಿಕೊoಡಿದ್ದು, ಇದರಿಂದಾಗಿ ಅಂತ್ಯ ಸಂಸ್ಕಾರಕ್ಕೆ ತೆರಳುವ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಅಲ್ಲದೇ ರುದ್ರಭೂಮಿಯ ನಾಮಪಲಕ, ಗೇಟ್ ಮುಂತಾದವುಗಳು ಹದಗೆಟ್ಟ ಸ್ಥಿತಿಯಲ್ಲಿದೆ. ಕಾರಣ ಕುಮಟಾ ( Kumta News) ಪುರಸಭೆಯ ವತಿಯಿಂದ ಶೀಘ್ರವೇ ಇಲ್ಲಿನ ಗಿಡ ಗಂಟಿಗಳನ್ನು ಸ್ವಚ್ಚಗೊಳಿಸಿ, ಅಂತ್ಯ ಸಂಸ್ಕಾರಕ್ಕೆ ತೆರಳುವ ಸಾರ್ವಜನಿಕರಿಗೆ ತ್ಯಾಜ್ಯ ಎಸೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೌದು,(Kumta News) ಪಟ್ಣಣದ ಮಣಕಿ ಮೈದಾನದ ಹಿಂಬಾಗದಲ್ಲಿರುವ ಹಿಂದೂ ರುದ್ರಭೂಮಿ ಸೇರಿದಂತೆ ಪುರಸಭಾ ವ್ಯಾಪ್ತಿಯ ಸುಮಾರು 4,5 ರುದ್ರಭೂಮಿಗಳು ಇಂತಹುದೇ ಸ್ಥಿತಿಯಲ್ಲಿದ್ದು, ಈ ಕುರಿತಾಗಿ ಪುರಸಭೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ. ರುದ್ರಭೂಮಿಗೆ ನಾಮಫಲಕಗಳನ್ನು ಅಳವಡಿಸಿ, ತ್ಯಾಜ್ಯಗಳನ್ನು ಎಸೆಯಲು ಕಸದ ತೊಟ್ಟಿಗಳ ವ್ಯವಸ್ಥೆ ಮಾಡಬೇಕಿದೆ. ಅಲ್ಲದೇ ಅಂತ್ಯ ಸಂಸ್ಕಾರಕ್ಕೆ ತೆರಳುವ ಸಾರ್ವಜನಿಕರು ಕೂಡಾ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯುವುದನ್ನು ನಿಲ್ಲಿಸಿ, ಸೂಕ್ತ ಸ್ಥಳದಲ್ಲಿ ಕಸಗಳನ್ನು ಎಸೆದು ಸ್ವಚ್ಚತೆಯ ಕುರಿತಾಗಿ ಗಮನಹರಿಸಬೇಕಿದೆ.

Kumta News: ವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮುಖ್ಯಾಧಿಕಾರಿಗಳು

ಈ ಎಲ್ಲಾ ಸಮಸ್ಯೆಗಳ ಕುರಿತಾಗಿ ಕುಮಟಾ ಪುರಸಭಾ ಮುಖ್ಯಾಧಿಕಾರಿಗಳಾದ ವಿಧ್ಯಾಧರ ಕಲಾದಗಿ ಅವರ ಗಮನಕ್ಕೆ ತರಲಾಗಿದ್ದು, ತಕ್ಷಣವೇ ಅವರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ಕುಮಟಾ ಪುರಸಭಾ ವ್ಯಾಪ್ತಿಯ ರುದ್ರಭೂಮಿಗಳು ಸರಿಯಾದ ನಿರ್ವಹಣೆ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ. ಇನ್ನು ಒಂದು ವಾರದ ಒಳಗಾಗಿ ಎಲ್ಲಾ ರುದ್ರಭೂಮಿಯ ಸ್ವಚ್ಚತಾ ಕಾರ್ಯವನ್ನು ಪುರಸಭೆಯ ವತಿಯಿಂದ ನಡೆಸಲು ಸೂಚಿಸಿದ್ದೇನೆ.

ಜೊತೆಗೆ ಎಲ್ಲಾ ರುಧ್ರಭೂಮಿಯಲ್ಲಿಯೂ 2 ಕಸದ ತೊಟ್ಟಿಯ ವ್ಯವಸ್ಥೆ ಮಾಡುತ್ತೆವೆ. ಅದೇ ರೀತಿ ಸಾರ್ವಜನಿಕರು ಕೂಡ ಕಸಗಳನ್ನು ಬೇಕಾಬಿಟ್ಟಿಯಾಗಿ ಎಸೆಯದೆ ಕಸದ ತೊಟ್ಟಿಗಳಲ್ಲಿ ಎಸೆದು ಸಹಕರಿಸಬೇಕು ಎಂದು ತಿಳಿಸಿದರು. ಇನ್ನು ಒಂದು ವಾರದೊಳಗಾಗಿ ರುದ್ರಭೂಮಿಗಳ ಸ್ವಚ್ಚತಾ ಕಾರ್ಯ ನಡೆಸುವದಾಗಿ ಕುಮಟಾ ಪುರಸಭಾ ಮುಖ್ಯಾಧಿಕಾರಿಗಳು ಭರವಸೆ ನೀಡಿದ್ದು, ಅದೇ ರೀತಿಯಾಗಿ ಮುಂಬರುವ ದಿನಗಳಲ್ಲಿ ಸಾರ್ವಜನಿಕರು ಸಹ ರುದ್ರ ಭೂಮಿಯನ್ನು ಸ್ವಚ್ಚವಾಗಿಟ್ಟುಕೊಂಡು ಹೋಗುವಲ್ಲಿ ಗಮನ ಹರಿಸಬೇಕಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

Back to top button