Focus News
Trending

‘ಪ್ರಗತಿ’ಯ ಸಾಧನೆ ಪ್ರಗತಿಯಲ್ಲಿ

ಕುಮಟಾ: ಶಿಕ್ಷಣ ಎಂದರೆ ಮನದಲ್ಲಿ ಸದಾ ನೆಲೆಯಾಗಿ ನೆಲೆಸುವ ನಿಟ್ಟಿನಲ್ಲಿ ಇರಬೇಕು. ಇದಕ್ಕೆ ನೇರ ಉದಾಹರಣೆ ಪ್ರಗತಿ ವಿದ್ಯಾಲಯ ಮೂರೂರು-ಆಂಗ್ಲ ಮಾಧ್ಯಮ ಪ್ರೌಢಶಾಲೆ. ಶಾಲಾರಂಭದಿಂದಲೂ ಅಂದರೆ ಕಳೆದ ಹತ್ತು ರ‍್ಷಗಳಿಂದ ಸತತ ವಾಗಿ 100% ಫಲಿತಾಂಶ ನೀಡುವ ಮೂಲಕ ಕುಮಟಾ ತಾಲೂಕಿನ ಶಿಕ್ಷಣರಂಗದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದು ದಶಕದ ಪ್ರಗತಿ ಯಲ್ಲಿ ಸಂಭ್ರಮಿಸುತ್ತಲಿದೆ.

ಕೋವಿಡ್ 19ನಿಂದ ಪರೀಕ್ಷೆ ಮುಂದೂಡಲ್ಪಟ್ಟರೂ ವಿದ್ಯಾರ್ಥಿಗಳ ಸಾಧನೆಯಲ್ಲೇನೂ ಇಳಿಮುಖ ಆಗಿಲ್ಲ ; ಪರೀಕ್ಷೆಗೆ ಕುಳಿತ 55 ವಿದ್ಯಾರ್ಥಿಗಳಲ್ಲಿ ಕುಮಾರಿ ಸ್ವಾತಿ.ವಿ.ಭಟ್ಟ ರಾಜ್ಯಕ್ಕೇ ಏಳನೆಯ Rank , ಕುಮಾರಿ ನೇಹಾ.ಎಸ್.ಭಟ್ಟ ರಾಜ್ಯಕ್ಕೇ ಒಂಬತ್ತನೇ Rank ಬರುವುದರ ಜೊತೆಗೆ 23 ವಿದ್ಯಾರ್ಥಿಗಳು First class, 30 ವಿದ್ಯಾರ್ಥಿಗಳು Distinction ನಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ..(60%ಕ್ಕಿಂತ ಕೆಳಗಿನ ಅಂಕ ಪಡೆದವರು ಒಬ್ಬರೂ ಇರುವುದಿಲ್ಲ)..

ಶಿಕ್ಷಕರ ನಿರಂತರ ಪರಿಶ್ರಮ, ವಿದ್ಯಾನಿಕೇತನ ಸಂಸ್ಥೆಯ (ಆಡಳಿತ ಮಂಡಳಿ) ಪ್ರೋತ್ಸಾಹ , ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾಶೀರ್ವಾದ, ಪಾಲಕ ಪೋಷಕರ ಸಹಕಾರ , ಇಲಾಖೆಯ ಮಾರ್ಗದರ್ಶನದಿಂದ ಈ ರೀತಿಯ ಸಾಧನೆ ಸಾಧ್ಯವಾಗಿದೆ.

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button