Follow Us On

WhatsApp Group
Important
Trending

Child Death: ಆಟವಾಡುತ್ತಿದ್ದ ವೇಳೆ ಬಾವಿಯಲ್ಲಿ ಬಿದ್ದ ಮಗು ಸಾವು

ಕಾರವಾರ: ಆಕೆ ಮೂರುವರ್ಷದ ಮಗು. ಮನೆಯ ಸಮೀಪ ಆಟವಾಡುತ್ತಾ ಇದ್ದಳು. ಆದರೆ, ಆಟವಾಡುತ್ತಾ ಇದ್ದ ವೇಳೆ ಮನೆಯ ಪಕ್ಕದಲ್ಲೇ ಇದ್ದ ಬಾವಿಯಲ್ಲಿ ಮಣ್ಣನ್ನು ಹಾಕಲು ಮುಂದಾಗಿದ್ದು, ಈ ವೇಳೆ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ. ಹೌದು, ಕಾರವಾರ ನಗರದ ಹರಿದೇವ ನಗರದಲ್ಲಿ ಈ ಘಟನೆ ನಡೆದಿದ್ದು, ಸ್ಥುತಿ (3) ಮೃತ ಮಗು (Child Death)ಎಂದು ತಿಳಿದುಬಂದಿದೆ.

MESCOM Recruitment: 200 ಹುದ್ದೆಗಳು: Apply Now

ಮನೆ ಮುಂದೆ ಆಟವಾಡುತ್ತಿದ್ದ ಮಗು ಕಾಣದೆ ಇದ್ದಾಗ ಪೋಷಕರು ಗಾಬರಿಗೊಂಡು, ಹುಡುಕಾಟ ನಡೆಸಿದ್ದಾರೆ. ಈ ವೇಳೆ ಎಲ್ಲಿಯೂ ಬಾಲಕಿ ಕಾಣಿಸಲಿಲ್ಲ. ಅನುಮಾನ ಬಂದು ಬಾವಿಯೊಳಗೆ ನೋಡಿದಾಗ, ಬಾಲಕಿ ಸಾವನ್ನಪ್ಪಿರುವ (Child Death) ವಿಷಯ ತಿಳಿದುಬಂದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದರೆ ಅಷ್ಟರಲ್ಲೇ ಮಗು ಮೃತಪಟ್ಟಿತ್ತು. ಕಾರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button