Focus News
Trending

Hiregutti School: ಹಿರೇಗುತ್ತಿ ಶಾಲೆಯ ಮಕ್ಕಳಿಂದ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ

ಹಿರೇಗುತ್ತಿ: 2023-24 ನೇ ಸಾಲಿನ ಸಾರ್ವಭೌಮ ಗುರುಕುಲ ಪ್ರೌಢಶಾಲೆ ಗೋಕರ್ಣ ಇವರ ಸಹಯೋಗದಲ್ಲಿ ಶ್ರೀಮತಿ ಸುಧಾಪೈ ನಾರಾಯಣ ಕ್ರೀಡಾಂಗಣ ಗೋಕರ್ಣದಲ್ಲಿ ನಡೆದ ಗೋಕರ್ಣ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ರೋಹಿತ ಎಸ್ ಅಂಬಿಗ, ಜೀವನ ವಿ ಗೌಡ, ಭುವನ ಆಯ್ ಗೌಡ ಯೋಗಾಸನದಲ್ಲಿ ಪ್ರಥಮ, ನಿರೀಕ್ಷಾ ಡಿ ನಾಯಕ, ವರ್ಷಾ ಡಿ ಗೌಡ ಚೆಸ್‌ನಲ್ಲಿ ಪ್ರಥಮ, ಕೌಶಿಕ ವಿ ನಾಯಕ ಹ್ಯಾಮರ್ ಥ್ರೋ ಪ್ರಥಮ, ಹರೀಶ ಡಿ ಗೌಡ ಎತ್ತರ ಜಿಗಿತ ಪ್ರಥಮ, ಸಿಂಚನಾ ಟಿ ಗೌಡ ಗುಂಡು ಎಸೆತ ಪ್ರಥಮ, ರಕ್ಷಿತಾ ಆರ್ ಹರಿಕಂತ್ರ 1500ಮೀ ಓಟದಲ್ಲಿ ಪ್ರಥಮ, ಜ್ಯೋತಿ ಬಿ ಗೌಡ ಎತ್ತರ ಜಿಗಿತ ಪ್ರಥಮ, ಲಕ್ಷಿ ಎನ್ ಗೌಡ 1500 ಮೀ ಓಟ ದ್ವಿತೀಯ, ಪ್ರಸನ್ನ ಬಿ ಗೌಡ 400 ಮೀ ಓಟ ದ್ವಿತೀಯ, ಅನುಷಾ ಪಿ ಹರಿಕಂತ್ರ ಎತ್ತರ ಜಿಗಿತ ದ್ವಿತೀಯ, ದೇವಕಿ ಎಮ್ ಗೌಡ ಚಕ್ರ ಎಸೆತ ದ್ವಿತೀಯ, ಗಗನ ಆರ್ ನಾಯಕ ಗುಂಡು ಎಸೆತ ತೃತೀಯ, ಮಂಜುನಾಥ ಗೌಡ 800ಮೀ ಓಟದಲ್ಲಿ ತೃತೀಯ, ಗುಂಪು ವಿಭಾಗದಲ್ಲಿ ಬಾಲಕರ ಕಬಡ್ಡಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ಮಕ್ಕಳು ಈ ಅಭೂತಪೂರ್ವ ಸಾಧನೆಗೈದು ಶಾಲೆಗೆ ಕೀರ್ತಿ ತಂದಿರುತ್ತಾರೆ. ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಕರಾದ ಶ್ರೀ ನಾಗರಾಜ ನಾಯಕ ಹಾಗೂ ಕ್ರೀಡಾ ಸಾಧನೆಗೆ ಶ್ರಮಿಸಿದ ಟೀಮ್ ಮ್ಯಾನೇಜರ್ ವಿಶ್ವನಾಥ ಬೇವಿನಕಟ್ಟಿ ಹಾಗೂ ಬಾಲಕಿಯರ ಮೇಲ್ವಿಚಾರಕರಾದ ಶಿಲ್ಪಾ ನಾಯಕ ಹಾಗೂ ಶಿಕ್ಷಕ ವೃಂದದವರಿಗೆ ಮಹಾತ್ಮಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಎನ್ ನಾಯಕ, ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ, ಕಾರ್ಯದರ್ಶಿಗಳಾದ ಶ್ರೀ ಮೋಹನ ಬಿ ಕೆರೆಮನೆ ಹಾಗೂ ಸದಸ್ಯರು, ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ರೋಹಿದಾಸ ಎಸ್ ಗಾಂವಕರ ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರಾದ ಶಾಂತಾ ಎನ್ ನಾಯಕ, ಹಿರೇಗುತ್ತಿ ಬ್ರಹ್ಮ ಜಟಕ ಯುವಕ ಸಂಘ ಹಾಗೂ ಊರಿನ ನಾಗರಿಕರು ಅಭಿನಂದನೆ ಸಲ್ಲಿಸಿ ಮುಂದಿನ ಹಂತಕ್ಕೆ ಶುಭ ಕೋರಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button