ಕಾರವಾರ: ಇತ್ತಿಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ (Heart Attack) ಪ್ರಕರಣಗಳು ಹೆಚ್ಚುತ್ತಲೇ ಇದೆ. ಒತ್ತಡದ ಜೀವನ ಶೈಲಿ ಇದಕ್ಕೆಲ್ಲ ಕಾರಣ ಎಂದು ವೈದ್ಯರು ಹೇಳುತ್ತಿದ್ದರೂ, ಕೋವಿಡ್ ನಂತರದ ದಿನಗಳಲ್ಲಿ ಹೃದಯಾಘಾತದ ಪ್ರಕರಣ ಯುವಕರಲ್ಲಿ ಹೆಚ್ಚಿರುವುದಂತೂ ಸುಳ್ಳಲ್ಲ. ಹೌದು, ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ 23 ವರ್ಷದ ಯುವಕ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ: 46 ಹುದ್ದೆಗಳು: 21 ಸಾವಿರದಿಂದ 91 ಸಾವಿರದ ವರೆಗೆ ವೇತನ : 10ನೇ ತರಗತಿ, ಪಿಯುಸಿ, ಪದವಿ ಆದವರು ಅರ್ಜಿ ಸಲ್ಲಿಸಿ: Apply Now
ಬೆಳಿಗ್ಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಕೆಲಸಕ್ಕೆಂದು ತೆರಳಲು ಸಜ್ಜಾಗುತ್ತಿದ್ದ ವೇಳೆ ಮನೆಯಲ್ಲಿ ಎದೆನೋವು (Heart Attack) ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಆತನನ್ನು ಕರೆತರಲಾಗಿದೆ. ಆದರೆ, ಚಿಕಿತ್ಸೆಗೆ ಕರೆತರುವಷ್ಟರಲ್ಲೇ ಯುವಕ ಮೃತಪಟ್ಟಿದ್ದ. ಮೃತ ಯುವಕ ಅಸ್ಲಾಂ ಖಾಸೀಂ ಸಾಬ್ ಶೇಖ್, ಆಶ್ರಯ ಕಾಲೋನಿ ನಿವಾಸಿ ಮತ್ತು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಮಿಕ. ಈತ 8 ವರ್ಷವಿರುವಾಗಲೆ ತಂದೆ – ತಾಯಿಯನ್ನು ಕಳೆದುಕೊಂಡಿದ್ದ. ಜೆ.ಸಿ.ಬಿ ಆಪರೇಟರ್ ವೃತ್ತಿಯನ್ನು ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ವಿಸ್ಮಯ ನ್ಯೂಸ್, ಯಲ್ಲಾಪುರ