Important
Trending

ಬೈಕ್‌ಗಳ ನಡುವೆ ಡಿಕ್ಕಿ: ಸಿಡಿದುಬಿದ್ದು ನಾಲ್ವರಿಗೆ ಗಂಭೀರ ಗಾಯ

ಸಿದ್ದಾಪುರ: ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ವಂದಾನೆ ಸಮೀಪದ ಶಿರೂರು ಮಾರಿಸಾಲ ಬಳಿ ನಡೆದಿದೆ. ದೊಡ್ಮನೆ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಬಿಳಗಿ ಕಡೆಯಿಂದ ವಂದಾನೆ ಕಡೆ ಹೋಗುತ್ತಿದ್ದ ಬೈಕ್ ನಡುವೆ ಅಪಘಾತವಾಗಿದೆ. ಕಡಕೇರಿ ಮೂಲದ ಇಬ್ಬರಿಗೆ ಮತ್ತು ಇನ್ನೊಂದು ಬೈಕ್ ನಲ್ಲಿರುವ ಹೊಡವತ್ತಿ ಮೂಲದ ಕೃಷ್ಣ, ವಿಜಯ ಲಕ್ಷ್ಮಿ ಎನ್ನುವವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ನಾಲ್ವರು ಸವಾರರ ಕೈ, ಕಾಲು, ತಲೆಗೆ ಗಾಯವಾಗಿದ್ದು, ಅವರನ್ನು ಸ್ಥಳೀಯರ ಸಹಕಾರ ದೊಂದಿಗೆ ಬಿಳಗಿ ಪಿ. ಎಚ್. ಸಿ ಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಸಿದ್ದಾಪುರ ಆಸ್ಪತ್ರೆಗೆ ಕಳುಹಿಸಲಾಗಿದೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button