Focus News
Trending

ಅತಿಕ್ರಮಣ ಆರೋಪ: ಜೆಸಿಬಿ ತಂದು ತೆರವುಗೊಳಿಸಿದ ಅರಣ್ಯಾಧಿಕಾರಿಗಳು

ಸಿದ್ದಾಪುರ: ಸರಿಯಾದ ದಾಖಲೆಯಿಲ್ಲದೆ ಅರಣ್ಯ ಭೂಮಿಯನ್ನು ರೈತರು ಅತಿಕ್ರಮಣ ಮಾಡಿಕೊಂಡಿರುವುದನ್ನು ಗಮನಿಸಿ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ಕೈದು ಜೆಸಿಬಿ ಮೂಲಕ ಪೋಲಿಸ್ ಬಿಗಿ ಬಂದೋಬಸ್ತ್ ನೊಂದಿಗೆ ಇಂಗು ಗುಂಡಿಗಳನ್ನ ತೆಗೆದಿರುವ ಘಟನೆ ಸಿದ್ದಾಪುರ ತಾಲೂಕಿನ ತ್ಯಾರ್ಸಿ ಬಳಿ ನಡೆದಿದೆ. ಈ ಜಾಗದಲ್ಲಿ ಯಾವುದೇ ಜಿ.ಪಿ.ಎಸ್ ಆಗಿರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸರಿಯಾದ ದಾಖಲೆಯಿಲ್ಲದೆ ಅರಣ್ಯ ಭೂಮಿಯನ್ನ ಅತಿಕ್ರಮಣ ಮಾಡಿಕೊಂಡಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿಸುತ್ತಿರುವ ದೃಶ್ಯವೂ ತ್ಯಾರ್ಸಿ ಬಳಿ ಕಂಡುಬAದಿತು. ತ್ಯಾರ್ಸಿ ಗ್ರಾಮದ ಹಲವು ರೈತರು ಅರಣ್ಯ ಇಲಾಖೆಯ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದು ಸರಿಯಾದಂತಹ ದಾಖಲೆ ಇಲ್ಲದೆ ಈಗಾಗಲೇ ಮೂರು ಬಾರಿ ತೆರವು ಪ್ರಯತ್ನ ಮಾಡುತ್ತ ಬಂದಿದ್ದೇವೆ, ಪುನಹ ರೈತರು ಬಳಸುತ್ತಾ ಬರುತ್ತಿದ್ದಾರೆ.

ಈ ಜಾಗದಲ್ಲಿ ಯಾವುದೇ ಜಿ.ಪಿ.ಎಸ್ ಆಗಿರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 20 ವರ್ಷಗಳಿಂದ ನಾವು ಇಲ್ಲೇ ಅತಿಕ್ರಮಣ ಮಾಡಿಕೊಂಡು ಬಳಸುತ್ತಾ ಬರುತ್ತಿದ್ದೇವೆ.ಆದರೆ ಇದರಲ್ಲಿ ಈ ರೀತಿ ಹೊಂಡಗಳನ್ನ ತೆಗೆದು ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಅತಿಕ್ರಮಣ ಮಾಡಿಕೊಂಡ ಸ್ಥಳೀಯರು ಆರೋಪಿಸಿದ್ದಾರೆ. ನಾಲ್ಕೈದು ಜೆಸಿಬಿ ಗಳೊಂದಿಗೆ ಪೋಲಿಸ್ ಬಿಗಿ ಬಂದೋಬಸ್ತ್ ನೊಂದಿಗೆ ಇಂಗು ಗುಂಡಿಗಳನ್ನ ತೆಗೆಯುತ್ತಿರುವ ದೃಶ್ಯ ಕಂಡು ಬಂದಿತು.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ

Back to top button