Follow Us On

WhatsApp Group
Focus News
Trending

ಸರಳಗಿ ಗಣಪತಿ ನಾಯ್ಕ್ ಇನ್ನಿಲ್ಲ: ಹೃದಯಾಘಾತದಿಂದ ನಿಧನ

ಹೊನ್ನಾವರ: ಹೊನ್ನಾವರ ತಾಲೂಕು ಕದಂಬ ಸೈನ್ಯ ಸಂಘಟನೆ ಸರಳಗಿ ಘಟಕ ಅಧ್ಯಕ್ಷರು, ಸರಳಗಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ತುಂಬಾ ಕ್ರಿಯಾಶೀಲರು ಆಗಿದ್ದ ಗಣಪತಿ ನಾರಾಯಣ ನಾಯ್ಕ್ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು, ಅವರಿಗೆ 56ವರ್ಷ ವಯಸ್ಸಾಗಿತ್ತು. ಸರಳಗಿ ಗ್ರಾಮದಲ್ಲಿ ಕನ್ನಡ ಪರ ಸಂಘಟನೆ ಕದಂಬ ಸೈನ್ಯ ಶಾಖೆ ತೆರೆದು ಅತ್ಯಂತ ಮುತುವರ್ಜಿಯಿಂದ ಕಾರ್ಯ ಮಾಡುತ್ತಿದ್ದರು.

ಗ್ರಾಮದ ಅನೇಕ ಸಮಸ್ಯೆಗಳನ್ನು ಆ ಸಂಘಟನೆ ಮೂಲಕ ಬಗೆಹರಿಸುತ್ತಿದ್ದರು. ಅನೇಕ ರಾಜಕೀಯ ಪ್ರಮುಖರ ನಂಟು ಹೊಂದಿದ ಅವರು ಅಭಿವೃದ್ಧಿ ಕಾರ್ಯ ಮಾಡುವಲ್ಲಿ ತುಂಬಾ ಸಹಕರಿಸುತ್ತಿದ್ದರು. ಅವರ ಅಕಾಲಿಕ ಮರಣ ಆ ಭಾಗದ ಎಲ್ಲರಿಗೂ ಬೇಸರ ಉಂಟು ಮಾಡಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಮೂಡಿದೆ. ಮೃತರು ಪತ್ನಿ, ಶ್ರೀಮತಿ’ಮಹಾಲಕ್ಷ್ಮಿ’ಒರ್ವಪುತ್ರ ಇರ್ವರು ಪುತ್ರಿಯರು, ಬಂದು ಬಳಗ ಹಾಗೂ ಅಪಾರ ಗೆಳೆಯರ ಬಳಗ ಅಗಲಿದ್ದಾರೆ.

ಕದಂಬ ಸೈನ್ಯದ ಪ್ರಮುಖರು ಗಣಪತಿ ನಾರಾಯಣ ನಾಯ್ಕ್ ನಿಧನಕ್ಕೆ ಕದಂಬ ಸೈನ್ಯ ಸಂಘಟನೆ ರಾಜ್ಜ ಅಧ್ಯಕ್ಷರು ಬೇಕ್ರಿ ರಮೇಶ್, ಈ ಹಿಂದಿನ ರಾಜ್ಜ ಸಂಚಾಲಕರು ಉದಯಕುಮಾರ್ ಕಾನಳ್ಳಿ ಬನವಾಸಿ, ಹಾಲಿ ರಾಜ್ಜ ಸಂಚಾಲಕರು ಶಿವಕುಮಾರ್, ರಾಜ್ಜ ಸಮಿತಿ ಸದಸ್ಯರು ಮೋಹನದಾಸ ನಾಯ್ಕ್ ಶಿರಸಿ, ಉತ್ತರ ಕನ್ನಡ ಜಿಲ್ಲಾ ಸಂಚಾಲಕರು ಪುರಂದರ ನಾಯ್ಕ್,ಸರಳಗಿ ;ಬನವಾಸಿ ಘಟಕ ಅಧ್ಯಕ್ಷ ಗುತ್ಯಪ್ಪ ಮಾದರ್ ಹೊನ್ನಾವರ ತಾಲೂಕಾ ಅಧ್ಯಕ್ಷರು ಗಣಪತಿ ನಾಯ್ಕಸರಳಗಿ ಘಟಕದ ಉಪಾಧ್ಯಕ್ಷರು ನಾರಾಯಣ ಎಮ್ ಉಪ್ಪಾ ಮತ್ತು ಅತಿಸ ನಿರ್ಮಲಕುಮಾರ ಕಾರ್ಯದರ್ಶಿಗಳಾದ ಲೊಕೇಶ ಎಸ್ ಉಪ್ಪಾ ಹೊನ್ನಪ್ಪಾ ನಾಯ್ಕ ‘ಸಂಚಾಲಕರು ಮಾರುತಿ ಜಿ ಉಪ್ಪಾರ ಗಣಪತಿ ಐ ಉಪ್ಪಾ ರ ಹಾಗೂ ಸರ್ವ ತತ್ವ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button