Focus News
Trending

ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ: ಸೆ 9 ಮತ್ತು 10 ರಂದು ಜೈ ಹಿಂದ್ ಕ್ರೀಡಾಂಗಣದಲ್ಲಿ ಆಯೋಜನೆ

ಅಂಕೋಲಾ: ಜಿಲ್ಲಾಡಳಿತ ಜಿ. ಪಂ ಉತ್ತರಕನ್ನಡ, ತಾಲೂಕು ಪಂಚಾಯತ್ ಅಂಕೋಲಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉ ಕ, ಅಡಿಯಲ್ಲಿ 2023-24 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆಪ್ಟೆಂಬರ್ 9 ಮತ್ತು 10 ರಂದು ಬೆಳಿಗ್ಗೆ 9 ಗಂಟೆಯಿಂದ ಪಟ್ಟಣದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಪುರುಷರ ವಿಭಾಗದಲ್ಲಿ 100 ಮೀ, 200 ಮೀ, 400 ಮೀ,800 ಮೀ 1500 ಮೀ,5000 ಮೀ, 10000 ಮೀ ಓಟ, 110 ಮೀ ಹರ್ಡಲ್ಸ್ 400 ಮೀ ರಿಲೆ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿಪಲ್ ಜಂಪ್, ಗುಂಡು ಎಸೆತ, ಈಟಿ ಎಸೆತ, ಚಕ್ರ ಎಸೆತದ ವೈಯಕ್ತಿಕ ಸ್ಪರ್ಧೆಗಳು ಹಾಗೂ ವಾಲಿಬಾಲ್, ಫುಟ್ಬಾಲ್, ಕಬಡ್ಡಿ, ಥ್ರೋ ಬಾಲ್ ಮತ್ತು ಯೋಗ ಗುಂಪು ಸ್ಪರ್ಧೆಗಳು ನಡೆಯಲಿವೆ.

ಮಹಿಳೆಯರ ವಿಭಾಗದಲ್ಲಿ 100 ಮೀ, 200 ಮೀ, 400 ಮೀ 800 ಮೀ 1500 ಮೀ ,3000 ಮೀ ಓಟ 100 ಮೀ ಹರ್ಡಲ್ಸ್, 400 ಮೀ ರಿಲೆ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿಪಲ್ ಜಂಪ್, ಗುಂಡು ಎಸೆತ, ಈಟಿ ಎಸೆತ, ಚಕ್ರ ಎಸೆತದ ವೈಯಕ್ತಿಕ ಸ್ಪರ್ಧೆಗಳು ಹಾಗೂ ವಾಲಿಬಾಲ್, ಫುಟ್ಬಾಲ್, ಥ್ರೋ ಬಾಲ್, ಖೋ ಖೋ, ಕಬಡ್ಡಿ ಮತ್ತು ಯೋಗ ಒಳಗೊಂಡ ಗುಂಪು ಸ್ಪರ್ಧೆಗಳು ನಡೆಯಲಿವೆ. ತಾಲೂಕಿನ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾಕೂಟ ಯಶಸ್ವಿಗೊಳಿಸುವಂತೆ ತಾ.ಪಂ ಪ್ರಭಾರಿ ಕಾರ್ಯನಿರ್ವಹಣ ಅಧಿಕಾರಿ ಸುನಿಲ್. ಎಂ ಮತ್ತು ಯುವ ಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಶಾಂತ ಗಾಂವಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button