![](http://i0.wp.com/vismaya24x7.com/wp-content/uploads/2020/07/uttara-kannada-9.png?fit=630%2C342&ssl=1)
ಜಿಲ್ಲೆಯಲ್ಲಿಂದು ಓರ್ವ ಸಾವು
43 ಮಂದಿ ಗುಣಮುಖರಾಗಿ ಬಿಡುಗಡೆ
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಗುರುವಾರ 181 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಅಂಕೋಲಾದಲ್ಲಿ 38, ಕುಮಟಾದಲ್ಲಿ 35, ಹೊನ್ನಾವರದಲ್ಲಿ 30, ಭಟ್ಕಳದಲ್ಲಿ 14, ಶಿರಸಿಯಲ್ಲಿ 17, ಸಿದ್ದಾಪುರ 4, ಯಲ್ಲಾಪುರದಲ್ಲಿ 10, ಮುಂಡಗೋಡಿನಲ್ಲಿ 4, ಕಾರವಾರದಲ್ಲಿ 23, ಜೋಯ್ಡಾ 2 ಮತ್ತು ಹಳಿಯಾಳದಲ್ಲಿ 14 ಪ್ರಕರಣ ದೃಢಪಟ್ಟಿದೆ. ಇದೇ ವೇಳೆ ಇಂದು 43 ಮಂದಿ ವಿವಿಧ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿಂದು ಕರೊನಾದಿಂದ ಓರ್ವ ಸಾವು
ಇನ್ನು ಅಂಕೋಲಾದಲ್ಲಿ 3, ಕುಮಟಾದಲ್ಲಿ 4, ಶಿರಸಿಯಲ್ಲಿ 5, ಹಳಿಯಾಳದಲ್ಲಿ 2, ಮುಂಡಗೋಡ 21, ಹಾಗೂ ಜೋಯಿಡಾದಲ್ಲಿ 8 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 181 ಕರೊನಾ ಕೇಸ್ ದಾಖಲಾದ ಬೆನ್ನಲ್ಲೆ ಸೋಂಕಿತರ ಸಂಖ್ಯೆ 5,369ಕ್ಕೆ ಏರಿಕೆಯಾಗಿದೆ. 1330 ಸೋಂಕಿತರು ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ವೇಳೆ ಜಿಲ್ಲೆಯ ಹಳಿಯಾಳದಲ್ಲಿ ಇಂದು ಕರೊನಾದಿಂದ ಓರ್ವ ಸಾವಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಕಾರವಾರ
ಬೇಕಾಗಿದ್ದಾರೆ
ಪ್ರತಿಷ್ಠಿತ ಕಂಪನಿಗೆ ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಆಸಕ್ತಿ ಇದ್ದಲ್ಲಿ ಕೂಡಲೇ ಸಂಪರ್ಕಿಸಿ
ಸಂಪರ್ಕಿಸಿ: 7848833568
ಇದನ್ನೂ ಓದಿ: ಇಂದಿನ ಪ್ರಮುಖ ಸುದ್ದಿಗಳು
- ಶಾಲಾ ಅಡುಗೆ ಸಿಬ್ಬಂದಿ ನೀರು ತರಲು ಹೋದಾಗ ಕಂಡಿದ್ದೇನು ? ಬಾವಿಯ ಗಡಗಡೆಗೆ ಕಟ್ಟಿದ್ದ ಹಗ್ಗದ ಇನ್ನೊಂದು ತುದಿಯಲ್ಲಿ ನೇತಾಡುತ್ತಿತ್ತು ಮೃತದೇಹ
- ತಾಯಿ ಬಳಿ ಮಾರುಕಟ್ಟೆಗೆ ಹೋಗಿ ಬರುತ್ತೇನೆಂದು ಹೋದವನು ಸಾವಿಗೆ ಶರಣು
- ಜಾತ್ರೆಯಲ್ಲಿ ಭಕ್ತರ ಮೇಲೆ ಹರಿದ ಕಾರು: ಯುವತಿ ಸಾವು, 9 ಮಂದಿಗೆ ಗಾಯ
- ಮಿರ್ಜಾನಿನ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರವೇಶ ದಾಖಲಾತಿ ಪರೀಕ್ಷೆ
- ಶಾಲಾ ಮಕ್ಕಳ ಕಾರ್ಯಕ್ರಮ ನೋಡಿ ಬರಲು ಹೋದವ ರೈಲು ಬಡಿದು ದುರ್ಮರಣ