ಮಾಹಿತಿ
Trending

ಅಂಕೋಲಾದಲ್ಲಿ 35 ಕೇಸ್ : ತ್ರಿಶತಕ ದಾಟಿದ ಸೋಂಕಿತರ ಸಂಖ್ಯೆ.

ರ್ಯಾಪಿಡ್ ಕಿಟ್ ಕೊರತೆ
ಆರ್.ಟಿ.ಪಿ.ಸಿ.ಆರ್ ಪರೀಕ್ಷಾ ವರದಿ ವಿಳಂಬ ಸಾಧ್ಯತೆ?

[sliders_pack id=”3491″]

ಅಂಕೋಲಾ : ತಾಲೂಕಿನಲ್ಲಿ ಗುರುವಾರ 35 ಹೊಸ ಕೋವಿಡ್ ಕೇಸ್‍ಗಳು ಕಾಣಿಸಿಕೊಂಡಿದ್ದು, ಈ ಮೂಲಕ ತಾಲೂಕಿನ ಒಟ್ಟೂ ಸೋಂಕಿತರ ಸಂಖ್ಯೆ ತ್ರಿಶತಕದ ಗಡಿ ದಾಟಿ 317ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. ಸೋಂಕು ಮುಕ್ತರಾದ 13 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು 70 ಪ್ರಕರಣಗಳು ಸಕ್ರಿಯವಾಗಿದೆ.


ರ್ಯಾಪಿಡ್ ಕಿಟ್ ಕೊರತೆ : ಸೋಂಕು ಪ್ರಕರಣಗಳು ಕಾಣಿಸಿಕೊಂಡಂತೆ ಸಂಪರ್ಕಿತರ ತ್ವರಿತ ಪರೀಕ್ಷೆಗೆ ಉಪಯೋಗಿಸಲ್ಪಡುತ್ತಿದ್ದ ರ್ಯಾಪಿಡ್ ಆ್ಯಂಟಿಜನ ಕಿಟ್‍ಗಳ ಕೊರತೆ ತಾಲೂಕಿನಲ್ಲಿ ಇದ್ದಂತೆ ಕಂಡುಬರುತ್ತಿದ್ದು, ಈ ವೇಳೆ ಅನಿವಾರ್ಯವಾಗಿ ಆರ್.ಟಿ.ಪಿ.ಸಿ.ಆರ್ ಮೊರೆ ಹೋಗಬೇಕಾಗುತ್ತಿದೆ. ಇದರಿಂದ ಸಮಯದ ವಿಳಂಬವು ಆಗುತ್ತಿದೆ. ಈ ಕುರಿತು ಸಂಬಂಧಿಸಿದವರು ತಾಲೂಕಿಗೆ ಅಗತ್ಯವಿರುವ ರ್ಯಾಪಿಡ್ ಕಿಟ್ ಪೂರೈಕೆಗೂ ಹೆಚ್ಚಿನ ಗಮನ ನೀಡಬೇಕಿದೆ. ಇಂದು ಕೇವಲ 35 ಗಂಟಲುದ್ರವ ಮಾದರಿ ಸಂಗ್ರಹಿಸಲಾಗಿದೆ ಎನ್ನಲಾಗಿದೆ.


ಸಿಬ್ಬಂದಿಗೆ ಸ್ವಾಗತ : ಪುರಸಭೆಯ ಕಂದಾಯ ವಿಭಾಗದ ನೌಕರನೋರ್ವನಲ್ಲಿ ಈ ಹಿಂದೆ ಕರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಕುಮಟಾದ ಕೋವಿಡ್ ಕೇರ್ ಸೆಂಟರನಲ್ಲಿ ದಾಖಲಾಗಿದ್ದರು. ಸೋಂಕು ಮುಕ್ತರಾದ ಅವರು ಇಂದು ಪುನಃ ತನ್ನ ಇಲಾಖಾ ಕರ್ತವ್ಯಕ್ಕೆ ಹಾಜರಾಗುವ ವೇಳೆ, ಪುರಸಭೆಯ ಪ್ರವೇಶದ್ವಾರದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ ಹಾರ ಹಾಕಿ ಸ್ವಾಗತಿಸಿದರು. ಇತರೆ ಸಿಬ್ಬಂದಿಗಳು ತಮ್ಮ ಸಹೋದ್ಯೋಗಿಗೆ ಪುಷ್ಪದಳ ಸಿಂಚನ ಮಾಡಿ ಬರಮಾಡಿಕೊಂಡರು.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪನಿಗೆ ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಆಸಕ್ತಿ ಇದ್ದಲ್ಲಿ ಕೂಡಲೇ ಸಂಪರ್ಕಿಸಿ
ಸಂಪರ್ಕಿಸಿ: 7848833568

Back to top button