Big News
Trending

ಸಮುದ್ರದಲ್ಲಿ ಹೆಜ್ಜೆ ಇಟ್ಟಲ್ಲೆಲ್ಲಾ ನೀಲಿ ಬೆಳಕಿನ ಪ್ರತಿಫಲ: ಬೆಳಕಿನಾಟದ ಅಚ್ಚರಿ ನೋಡಿ

ಕಡಲ ಕಿನಾರೆಯ ಕೌತುಕ
ಕಾಲಿಟ್ಟಲ್ಲೆಲ್ಲಾ ನೀಲಿಯ ಬೆಳಕು

[sliders_pack id=”1487″]

ಕುಮಟಾ: ಕಾರವಾರದಿಂದ ಹೊನ್ನಾವರದ ಕಡಲ ತೀರದಲ್ಲಿ ಕಳೆದ ಕೆಲವು ದಿನಗಳಿಂದ ಸಮುದ್ರದ ನೀರು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿದ್ದು ವಿದ್ಯುತ್ ದೀಪಗಳನ್ನು ಸಮುದ್ರದ ನೀರಿನ ಮೇಲೆ ಪೋಣಿಸಿದಂತೆ ಕಂಡು ಬರುತ್ತಿರುವ ದೃಶ್ಯ ಕೆಲವೆಡೆ ಕಂಡುಬರುತ್ತಿದೆ. ಹೌದು, ಕುಮಟಾದ ಬೀಚ್‌ನಲ್ಲಿ ಹೆಜ್ಜೆ ಇಟ್ಟಲ್ಲೆಲ್ಲಾ ನೀಲಿ ಬೆಳಕಿನ ಪ್ರತಿಫಲ ಕಂಡುಬರುತ್ತಿದ್ದು, ಈ ಬೆಳಕಿನಾಟ ಜನಸಾಮಾನ್ಯರ ಅಚ್ಚರಿಗೆ ಕಾರಣವಾಗಿದೆ. ಇಲ್ಲಿನ ಕಡಲ ತೀರಲ್ಲಿ ನಡೆದುಹೋದರೆ, ಕಾಲಿಟ್ಟಲ್ಲೆಲ್ಲಾ ನೀಲಿಯ ಬೆಳಕು ಪ್ರತಿಫಲಿಸುತ್ತಿದೆ. ಈಗ ಕಳೆದ ಕೆಲದಿನಗಳ ಹಿಂದೆ ಕಾರವಾರದ ಕಡಲ ತೀರದಲ್ಲೂ ಇದೇ ರೀತಿಯ ದೃಶ್ಯಗಳು ಕಂಡುಬoದಿದ್ದವು.

ಸಮುದ್ರದ ನೀರು ಹೊಳೆಯುವುದು ಏಕೆ?

ತಜ್ಞರ ಪ್ರಕಾರ ಸಮುದ್ರದಲ್ಲಿ ಬೆಳೆದ ಒಂದು ವಿಧವಾದ ಪಾಚಿಯಿಂದ ಈ ತರನಾದ ಹೊಳೆಯುವ ನೀರು ಗೋಚರವಾಗುತ್ತದೆ. ಈ ರೀತಿಯ ಪಾಚಿಗಳು ಅಪಾರ ಪ್ರಮಾಣದಲ್ಲಿ ಬೆಳೆದಿದ್ದರಿಂದ ಮತ್ತು ಈ ಪಾಚಿಗಳು ಕೂಡಾ ಬೆಳಗುವುದರಿಂದ ಸಮುದ್ರದ ನೀರಿನಲ್ಲಿ ವ್ಯತ್ಯಾಸವಾಗಿರುವುದು ಕಂಡು ಬರುತ್ತದೆ. ಈ ರೀತಿಯ ಪಾಚಿಯ ಬೆಳವಣಿಗೆಯು ಜಲಜೀವಿಗಳಿಗೆ ಮಾರಕವಾಗಿದ್ದು, ಕಳೆದ ಬಾರಿ ಆಗಿದ್ದ ಇದೇ ರೀತಿಯ ಬೆಳವಣಿಗೆಯಿಂದ ಒಂದು ಜಾತಿಯ ಮೀನಿನ ಸಂತತಿಯೇ ಕಡಿಮೆಯಾಗಿದೆ ಎನ್ನುವುದು ಮೀನುಗಾರರ ಅಭಿಪ್ರಾಯವಾಗಿದೆ.

ಈ ಮೊದಲೇ ಮತ್ಸ್ಯಕ್ಷಾಮದಿಂದ ಮೀನುಗಾರರು ಸಂಕಷ್ಟ ಅನುಭವಿಸಿತ್ತಿದ್ದು, ಈಗ ಮತ್ತೆ ಈ ಬೆಳವಣಿಗೆಯು ಮತ್ಸ್ಯಕ್ಷಾಮಕ್ಕೆ ಕಾರಣವಾಗಬಹುದು ಎನ್ನುವುದು ಅನುಭವಿಗಳ ಅಭಿಪ್ರಾಯವಾಗಿದೆ.ಅಲೆಗಳು ಬಂದು ದಡಕ್ಕೆ ಅಪ್ಪಳಿಸಿದಾಗ ನೀಲಿ ಬಣ್ಣದ ಬೆಳಕು ಮೂಡಿ, ಬಳಿಕ ಮಾಯವಾಗುತ್ತಿದೆ. ಈ ಪ್ರಕ್ರಿಯೆ ರಾತ್ರಿಯಿಡೀ ನಡೆಯುತ್ತಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button