Follow Us On

Google News
Big News
Trending

ಅಂಗಾರಕ ಸಂಕಷ್ಟಿ: ಪ್ರಸಿದ್ಧ ಇಡಗುಂಜಿ ಮಹಾಗಣಪತಿ ಸನ್ನಿಧಿಗೆ ಹರಿದುಬಂದ ಜನಸಾಗರ: ಅಂಗಾರಕ ಸಂಕಷ್ಟಿಯಂದು ಮಹಾಗಣಪತಿಯನ್ನು ಆರಾಧಿಸದರೆ ಏನಾಗುತ್ತೆ?

ಹೊನ್ನಾವರ: ಮಂಗಳವಾರ ಬರುವ ಸಂಕಷ್ಟಿ ಚತುರ್ಥಿಯನ್ನೇ ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ಅಂಗಾರಕ ಸಂಕಷ್ಟಿಗೆ ವಿಶೇಷ ಮಹತ್ವವಿದೆ. ಈ ದಿವಗು ಭಗವಾನ್ ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದನೆಂದು ಹಿಂದೂ ಧರ್ಮಗ್ರಂಥದಲ್ಲಿ ಹೇಳಾಗಿದೆ. ಹೀಗಾಗಿ ಈ ದಿನದಂದು ಉಪವಾಸ ಮಾಡುವ ವ್ಯಕ್ತಿಯುವ ಗಣೇಶ ಮತ್ತು ಮಂಗಳನ ಆಶೀರ್ವಾದವನ್ನು ಪಡೆಯುತ್ತಾನೆ . ಜೀವನದಲ್ಲಿ ಎಂದಿಗೂ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂಬ ನಂಬಿಕೆ ಭಕ್ತರದ್ದು..

ಅಂಗಾರಕ ಸಂಕಷ್ಟಿಯ ಅಂಗವಾಗಿ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ಹೊನ್ನಾವರ ತಾಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಮುಂಜಾನೆಯಿಂದಲೆ ಜನರು ಸಾಗರೋಪಾದಿಯಲ್ಲಿ ಬಂದು ವಿಘ್ನನವಿನಾಷಕನ ದರ್ಶನ ಪಡೆದರು,

ಹೊನ್ನಾವರ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಸ್ಥಳವಾದ ಶ್ರೀ ಕ್ಷೇತ್ರ ಇಡಗುಂಜಿ ವಿನಾಯಕ ದೇವಸ್ಥಾಕ್ಕೆ ಅಂಗಾರಕ ಸಂಕಷ್ಟಿಯ ನಿಮಿತ್ತ ನಾಡಿನ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಹಣ್ಣು-ಕಾಯಿ, ಪಂಚಕಜ್ಜಾಯ ಗಣಹೋಮ ಸತ್ಯನಾರಾಯಣ ವೃತ ಸತ್ಯಗಣಪತಿ ವ್ರತ, ಇತ್ಯಾದಿ ಸೇವೆ ಸಲ್ಲಿಸಿ ಭಕ್ತರು ಹರಕೆ ಸಲ್ಲಿಸಿದರು. ಅಂಗಾರಕ ಸಂಕಷ್ಠಿಯ ಹಿನ್ನಲೆಯಲ್ಲಿ ದೇವಾಲಯದಲ್ಲಿ ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು,

ಈ ಸಂದರ್ಭದಲ್ಲಿ ಅರ್ಚಕರಾದ ವಿಷ್ಣು ಭಟ್ಟ ಅವರು ಮಾತನಾಡಿ, ಒಂದು ಕಾರ್ಯವು ನಿರ್ವಿಘ್ನವಾಗಿ ಪರಿಪೂರ್ಣತೆ ಕಾಣಬೇಕಾದರೆ ಗಣಪತಿ ಪೂಜೆಯಾಗಬೇಕು. ವಿಶ್ವಕ್ಕೆ ಬಂದಂತ ಮಹಮಾರಿಯ ಉಪದ್ರವವನ್ನು ನಿವಾರಿಸಲಿ. ಮಹಾಗಣಪತಿ ಒಳ್ಳೆಯದನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದರು.

ಅರ್ಚಕರಾದ ಮಂಜುನಾಥ ಭಟ್ಟ ಮಾತನಾಡಿ ಅಂಗಾರಕ ಸಂಕಷ್ಟಿ ಈ ಹಿನ್ನಲೆಯಲ್ಲಿ ದೇವಾಲಯಕ್ಕೆ ಸಹಸ್ರ ಸಹಸ್ರ ಜನರು ದೇವಾಲಯಕ್ಕೆ ಬೆಳಗಿನ ಜಾವ ಮೂರು ಘಂಟೆಯಿಂದಲೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಂಗಲಮೂರ್ತಿ ಜಗತ್ತಿಗೆ ಬಂದಿರುವ ಸಂಕಷ್ಟಗಳನ್ನು ನಿವಾರಿಸಿ ಶ್ರೇಯಸನ್ನು ಅನುಗ್ರಹಿಸಲಿ. ಇಡಿ ಜಗತ್ತಿಗೆ ಮಂಗಲವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸಿದ್ದೇವೆ. 200 ಕ್ಕೂ ಹೆಚ್ಚು ಗಣಹೋಮ ನೂರಾರು ಸತ್ಯ ನಾರಾಯಣ, ಸತ್ಯ ಗಣಪತಿ ವೃತ,. 30 ಸಾವಿರಕ್ಕು ಹೆಚ್ಚು ತೆಂಗಿನಕಾಯಿ ಸರ್ಮಣೆ 115 ಕ್ವಿಂಟಾಲ್ ಗೂ ಅಧಿಕ ಪಂಚಖಾದ್ಯ ಪ್ರಸಾದ ಮಹಾಗಣಪತಿಗೆ ಸಮರ್ಪಣೆಯಾಗಿ ಭಕ್ತರಿಗೆ ವಿತರಿಸಲಾಯಿತು ಎಂದರು.

ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Back to top button