Follow Us On

Google News
Big News
Trending

ವಿಶ್ವೇಶ್ವರ ಹೆಗಡೆ ಕಾಗೇರಿ ಮತಯಾಚನೆ: ಕಾಂಗ್ರೆಸ್ಸಿನ ಹಲವು ಪ್ರಮುಖರು ಬಿಜೆಪಿ ಸೇರ್ಪಡೆ

ಶಿರಸಿ : ದೇಶದಲ್ಲಿ ನರೇಂದ್ರ ಮೋದಿಯವರ ನಾಯಕತ್ವ,ಮತ್ತು ನಮ್ಮ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಯವರನ್ನು ಬೆಂಬಲಿಸಿ , ಬಿಜೆಪಿಯ ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷದ ಹಲವು ಪ್ರಮುಖರು ಬಿಜೆಪಿಯನ್ನು ಸೇರಿದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖಂಡರನ್ನು ಬರಮಾಡಿಕೊಂಡರು.

ಮಂಗಳವಾರ ಯಲ್ಲಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಭಟ್ಟ ಹಾಸಣಗಿ, ಪ್ರಮುಖರಾದ ಗಜಾನನ ಬೂರನಮನೆ, ಗಣೇಶ ಹೆಗಡೆ, ಅನುಪಮಾ ಪೂಜಾರಿ, ರಾಜೇಂದ್ರ ಗೌಡ, ಗಜು ನಾಯ್ಕ, ಹೇರು ಶಿಂದೆ, ಸುನಿಲ ಕಾಂಬಳೆ, ಬಾಬು ಶಿಂಡಗೆ, ಬಾಗು ಪಟಗಾರ, ರತ್ನಾಕರ ಹೆಗಡೆ, ಪ್ರಭಾಕರ ಭಂಡಾರಿ, ಗುರು ಪೂಜಾರಿ, ನಾರಾಯಣ ಕಾಂಡೇಕರ ಬಿಜೆಪಿ ಪಕ್ಷ ಸೇರ್ಪಡೆಯಾದರು.

ಇದರ ಜೊತೆಗೆ ಬನವಾಸಿ ಭಾಗದ ಶಂಕರ ಗೌಡ್ರು, ಬಿ.ವಿ ಗೌಡ್ರು, ಶ್ರೀಧರ ನಾಯ್ಕ, ಪುಟ್ಟಪ್ಪ ಗೌಡ್ರು, ವಿಜಯ ನಾಯ್ಕ ಮುಂತಾದವರು ಭಾಜಪಾದ ಸಿದ್ಧಾಂತವನ್ನು ಒಪ್ಪಿಕೊಂಡು ಪಕ್ಷವನ್ನು ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಎನ್. ಎಸ್ ಹೆಗಡೆ, ವಕ್ತಾರ ಹರಿಪ್ರಕಾಶ ಕೋಣೆಮನೆ, ಪ್ರಮುಖರಾದ ಪ್ರಮೋದ ಹೆಗಡೆ, ಉಮೇಶ ಭಾಗ್ವತ, ಯಲ್ಲಾಪುರ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ಮೋದಿಜಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತ್ತೊಮ್ಮೆ ಬಿಜೆಪಿ ಸರ್ಕಾರದ ರಚನೆಗಾಗಿ ಶ್ರಮಿಸಲು ಪಕ್ಷಕ್ಕೆ ಸೇರ್ಪಡೆಗೊಂಡ ಎಲ್ಲರನ್ನೂ ಅಭ್ಯರ್ಥಿ ಕಾಗೇರಿ ಆತ್ಮೀಯವಾಗಿ ಸ್ವಾಗತಿಸಿದರು. ದೇಶ ಮತ್ತು ಧರ್ಮದ ರಕ್ಷಣೆಗಾಗಿ ಮೋದಿಜೀ ಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಕೈ ಜೋಡಿಸಬೇಕಾಗಿದೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ದಾಖಲೆಯ ಮತಗಳಿಂದ ಬಿಜೆಪಿಯನ್ನು ಗೆಲ್ಲಿಸಿ, ಮೋದಿಜಿಯವರಿಗೆ ಉಡುಗೊರೆ ನೀಡವೇಕು ಎಂದು ಕಾಗೇರಿ ಕರೆ ನೀಡಿದರು.

ವಿಸ್ಮಯ ನ್ಯೂಸ್ ಶಿರಸಿ

Back to top button