Follow Us On

WhatsApp Group
Important
Trending

Whale: ಅರಬ್ಬಿ ಸಮುದ್ರದಲ್ಲಿ ತೇಲಿಬಂದ ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹ

ಈ ಬೃಹತ್ ಮೀನು ಕೊಳೆತ ಸ್ಥಿತಿಯಲ್ಲಿ ಪತ್ತೆ

ಹೊನ್ನಾವರ: ಅರಬ್ಬಿ ಸಮುದ್ರದ ಕಡಲತೀರದಲ್ಲಿ ಭಾರೀ ಗಾತ್ರದ (Whale) ಮೀನಿನ ಕಳೆಬರಹ ಪತ್ತೆಯಾಗಿದೆ. ಹೌದು, ತಾಲೂಕಿನ ಮಂಕಿ ಸಮೀಪದ ದಡದ ಸಮೀಪ ಬಂದುಬಿದ್ದ ಈ ಬೃಹತ್ ಗಾತ್ರದ ಮೀನಿನ ಕಳೆಬರಹವನ್ನು ಸಾರ್ವಜನಿಕರು ಕುತೂಹಲದಿಂದ ನೋಡುತ್ತಿದ್ದಾರೆ. ಇದು 35 ಮೀಟರ್ ಉದ್ದವಿದ್ದು, ಮರಣೋತ್ತರ ಪರೀಕ್ಷೆ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

ಈ ಬೃಹತ್ ಮೀನು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಮುದ್ರದ ಅಲೆಯ ಹೊಡೆತಕ್ಕೆ ಈ ಮೀನು ದಡಕ್ಕೆ ಬಂದಿದೆ. ಹೊನ್ನಾವರ ಕರಾವಳಿ ಕಾವಲು ಪಡೆಯವರು ಸಂಬoಧಿಸಿದ ಗ್ರಾಮ ಪಂಚಾಯತ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಲಾಗಿದೆ. ಅರಣ್ಯಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಇದು ಬೃಹತ್ ತಿಮಿಂಗಿಲ (Whale) ಮೀನಿನ ಕಳೆಬರಹ ಎನ್ನಲಾಗುತ್ತಿದ್ದು ಅರಣ್ಯ ಅಧಿಕಾರಿಗಳಿಂದ ಹೆಚ್ಚಿನ ವಿವರ ತಿಳಿದುಬರಬೇಕಿದೆ.

Srinivas E Vehicle

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button