Important
Trending

ಗೌರಿ-ಗಣೇಶ ಹಬ್ಬಕ್ಕೆ ವಿಶೇಷ ತಯಾರಿ: ಕೈಯ್ಯಿಂದಲೇ ತಯಾರಾಗ್ತಿದೆ ವಿಶೇಷ ಚಕ್ಕುಲಿ

ಹಳ್ಳಿಗಳಲ್ಲಿ ಜೋರಾಗಿದೆ ಚಕ್ಕುಲಿ ಕಂಬಳ

ಶಿರಸಿ: ಗೌರಿ-ಗಣೇಶ ಹಬ್ಬ (gowri ganesha festival) ಅಂದ್ರೆ ಅದೇನೋ ಸಡಗರ, ಸಂಭ್ರಮ. ಉತ್ತರಕನ್ನಡ ( Uttara Kannada ) ಜಿಲ್ಲೆಯ ಮಲೆನಾಡಿಗರಿಗೆ ಯಾವುದೇ ಹಬ್ಬ ಬಂದರೂ ಅವರಲ್ಲೇನೋ ವಿಶೇಷತೆ ಇದ್ದೇ ಇರುತ್ತೆ. ಈಗಂತೂ ಗೌರಿ-ಗಣೇಶ ಹಬ್ಬದ ಸಮಯ. ಈ ಹಬ್ಬಕ್ಕೆ ಮಲೆನಾಡ ಭಾಗವಾದ ಶಿರಸಿಯಲ್ಲಿ ವಿಶೇಷ ಚಕ್ಕುಲಿ ತಿಂಡಿ ತಿನಿಸು ಮಾಡೋದ್ರಲ್ಲಿ ಜನರು ನಿರತರಾಗಿದ್ದಾರೆ.

ಈ ತಿನಿಸನ್ನ ಮಾಡೋಕೆ ಕೂಡು ಕುಟುಂಬ ಒಟ್ಟಾಗಿ ಸೇರಿ ಹಬ್ಬದ ಸಡಗರವನ್ನ ಆಚರಿಸುತ್ತಾರೆ. ಶಿರಸಿ ಸೇರಿ ಮಲೆನಾಡಿನ ಭಾಗದಲ್ಲಿ ಹಬ್ಬ ಹರಿದಿನಗಳು ವಿಭಿನ್ನ, ವೈವಿಧ್ಯ.. ಅದೇ ಇಲ್ಲಿನವರ ವಿಶೇಷತೆ. ಹಬ್ಬ ಹರಿದಿನವಿರಬಹುದು, ಪೂಜೆ ಪುನಸ್ಕಾರಗಳಿರಬಹುದು. ಎಲ್ಲದರಲ್ಲಿಯೂ ಇತರರಿಗಿಂತ ಸ್ವಲ್ಪ ವಿಭಿನ್ನ. ಈಗ ಗೌರಿ ಗಣೇಶ ಹಬ್ಬದ ಸಂಭ್ರಮ. ಮಲೆನಾಡಿಗರಲ್ಲಿ ಅದರಲ್ಲೂ ಶಿರಸಿ ಹಾಗೂ ಸುತ್ತಮುತ್ತಲಿನ ಭಾಗದವರಿಗೆ ಈ ಹಬ್ಬದ ಸಡಗರ ಸ್ವಲ್ಪ ಜಾಸ್ತಿಯೇ. ಗಣೇಶ ಚತುರ್ಥಿ ಅಗಮಿಸುತ್ತಿದ್ದಂತೆ ಎಲ್ಲರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಗಣೇಶ ಚೌತಿಗೆ ಮಾಡುವ ಗಣೇಶನಿಗೆ ಪ್ರಿಯವಾದ ಈ ಚಕ್ಕುಲಿ ಕಂಬಳ ಎಲ್ಲೆಡೆ ಸಂಭ್ರಮದಿoದ ಕೆಲಸ ಸಾಗಿದೆ.

ಶಿರಸಿಯ ಹೆಗಡೆಕಟ್ಟ ಸಮೀಪದ ಕಲ್ಮನೆ ಊರಿನಲ್ಲಿ ಎಲ್ಲರೂ ಚಕ್ಕುಲಿ ಕಂಬಳ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಶಿರಸಿಯ (sirsi) ಕೆಲವೇ ಕಡೆ ಮೊದಲಿನಿಂದಲೂ ರೂಢಿಯಲ್ಲಿರುವ ಕೈ ಚಕ್ಕುಲಿ ಕಂಬಳ ಶುರುವಾಗಿದೆ. ಎಲ್ಲ ಕಂಬಳದoತೆ ಕಲ್ಮನೆ ಹೆಗ್ಗಾರು,ಹೆಗಡೆಕಟ್ಟ ಸುತ್ತಮುತ್ತಲಿನ ಊರಿನವರು, ಸಂಬoಧಿಗಳು ಒಬ್ಬರು ಮತ್ತೊಬ್ಬರ ಮನೆಗೆ ಕಂಬಳಕ್ಕೆ ಸಹಕರಿಸುತ್ತಾರೆ. ಕೈ ಕಂಬಳದಲ್ಲಿ ಬರೀ ಚಕ್ಕುಲಿ ಅಷ್ಟೇ ಅಲ್ಲದೆ, ಪರಿಣಿತರು ಅಕ್ಷರಗಳನ್ನು ಸಹ ಬರೆಯುತ್ತಾರೆ. ಅನಾದಿ ಕಾಲದಿಂದಲು ರೂಡಿಯಲ್ಲಿದ್ದ ಚಕ್ಕುಲಿ ಕಂಬಳ ಮಾಡೋದು ಅಂದ್ರೆ ಇವರಿಗೆ ಎಲ್ಲಿಲ್ಲದ ಸಂತೋಷ. ಕಾಲ ಬದಲಾದಂತೆ ಮನುಷ್ಯನು ವೈಜ್ಞಾನಿಕ ಉಪಕರಣಗಳಿಗೆ ಅಂಟಿಕೊoಡಿದ್ದರೂ ಈ ಊರಲ್ಲಿ ಮಾತ್ರ ಎಲ್ಲರೂ ಪ್ರತಿವರ್ಷ ಕೈ ಕಂಬಳನ್ನೇ ಮಾಡುತ್ತಾರೆ.

ವಿಡಿಯೋ ಇಲ್ಲಿದೆ ನೋಡಿ

ಹಿಂದಿನಿoದ ಬಂದ ಸಂಪ್ರದಾಯ ಒಂದುಕಡೆ ಆಗಿದ್ರೆ ಇಂತಹ ವಿಶೇಷ ಕಲೆ ಎಲ್ಲರಿಗೂ ಬರುವುದಿಲ್ಲ. ಅದರಲ್ಲೂ ಈ ಚಕ್ಕುಲಿ ರುಚಿ ಹಾಗೂ ಬಾಳಿಕೆ ಜಾಸ್ತಿ. ಉಪಕರಣಗಳಿಂದ ಮಾಡಿದ ಚಕ್ಕುಲಿ ಕೆಲವೇ ದಿನ ಉಳಿದರೆ ಇದನ್ನು ನಾಲ್ಕಾರು ತಿಂಗಳುಗಳ ಕಾಲ ಇಡಬಹುದು. ಹಬ್ಬದಲ್ಲಿ ಬಂದ ಸಂಬoಧಿಕರಿಗೆ ಹಾಗೂ ದೂರದ ಊರಲ್ಲಿರುವವರಿಗೆ ಪಾರ್ಸಲ್ ಕಳಿಸಿಕೊಡುತ್ತಾರೆ. ಆದ್ದರಿಂದ ಈ ಊರಲ್ಲಿ ಪ್ರತಿ ಮನೆಯಲ್ಲಿಯೂ ಒಂದೇ ಬಾರಿ ಎರಡುಮೂರು ಕ್ಯಾನ್ ಗಟ್ಟಲೇ ಚಕ್ಕುಲಿ ಮಾಡಿ ತುಂಬಿಡುತ್ತಾರೆ. ಅನಾದಿ ಕಾಲದಿಂದಲೂ ಚಕ್ಕುಲಿ ಕಂಬಳವನ್ನ ಮಾಡುತ್ತ ಬಂದಿರೋ ಇಲ್ಲಿನ ಜನರು ಈಗಲೂ ಇದನ್ನ ರೂಢಿಯಲ್ಲಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಚಕ್ಕುಲಿಯನ್ನ ಮಿಷನ್ ನಲ್ಲಿ ಮಾಡ್ತಾರೆ.

ಆದ್ರೆ ಇಲ್ಲಿ ಹದ ಮಾಡಿದ ಹಿಟ್ಟನ್ನ ತಯಾರು ಮಾಡಿ ಕೈಯಲ್ಲೇ ಬಿಡೋದು ವಿಶೇಷತೆ. ವಿವಿಧ ವಿನ್ಯಾಸದ ಚಕ್ಕುಲಿ ಮಾಡೋದು ಇನ್ನೊಂದು ವಿಶೇಷ. ಯಾವುದೇ ಹಬ್ಬ ವಾದರೂ ಸಹ ಮಲೆನಾಡಿಗರಲ್ಲಿ ಅದೇನೋ ಸಂಭ್ರಮ. ಒಂದಲ್ಲಾ ಒಂದು ವಿಶೇಷತೆಯಿಂದ ಹಬ್ಬವನ್ನ ಆಚರಿಸೋ ಮಲೆನಾಡಿಗರು ಗೌರಿ ಗಣೇಶ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ

ವಿಸ್ಮಯ ನ್ಯೂಸ್ ಶಿರಸಿ

Back to top button