ಅoಕೋಲಾ: ಕಾರವಾರದ ಕಡವಾಡದಿಂದ,ಹೊನ್ನಾವರದ ಚಂದಾವರ ಸೀಮೆಯವರೆಗೆ ಅಸಂಖ್ಯ ಭಕ್ತ ಸಮೂಹ ಹೊಂದಿರುವ ಅಂಕೋಲಾ ತಾಲೂಕಿನ ಶ್ರೀವೆಂಕಟರಮಣ ದೇವರು ದೊಡ್ಡ ದೇವರೆಂದೇ ಪ್ರಸಿದ್ಧಿಯಾಗಿದೆ. ಶ್ರಾವಣ ಮಾಸದಲ್ಲಿಯಂತೂ ಇಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.ಶ್ರಾವಣದ ಮೊದಲ ಶನಿವಾರದಿಂದ ಹಿಡಿದು ಸೆಪ್ಟೆಂಬರ್ 9ರ ಕೊನೆಯ ಶನಿವಾರದವರೆಗೆ ಹಲವು ದಾನಿಗಳು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಶ್ರಾವಣದ ಕೊನೆಯ ಶನಿವಾರ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ , ಅನ್ನದಾನ ಕಾರ್ಯ ನಡೆಯಿತು. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ಶ್ರೀದೇವರ ದರ್ಶನ ಪಡೆದುಕೊಂಡರು. ನಂತರ ಪ್ರಸಾದ ಭೋಜನ ಸ್ವೀಕರಿಸಿದರು. ವಾರದಿಂದ ವಾರಕ್ಕೆ ಭಕ್ತರ ಜನ ಜಾತ್ರೆ ಕಂಡು ಬರುತ್ತಿದ್ದು ಶ್ರಾವಣದ ಕೊನೆಯ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಮೂಹ ಕಂಡುಬAತು. ಆರಕ್ಷಕ ಇಲಾಖೆಯವರು,ನೂಕು ನುಗ್ಗಲಾಗದಂತೆ ಕರ್ತವ್ಯ ನಿರ್ವಹಿಸಿದರು. ಗೆಳೆಯರ ಬಳಗ ಅಂಕೋಲಾ ಹಾಗೂ ಇತರೆ ಸ್ವಯಂಸೇವಕರು ಶ್ರೀ ದೇವರ ಪ್ರಸಾದ ಭೋಜನ ವಿತರಿಸಲು ಸೇವೆ ಸಲ್ಲಿಸಿದರು. ಮಳೆಯ ಬಿಡುವು ಶನಿವಾರದ ಸಂತೆ, ಕೊನೆಯ ಶ್ರಾವಣ ಶನಿವಾರ ಮತ್ತಿತರ ಕಾರಣಗಳಿಂದ ಭಕ್ತರ ಜನಜಂಗುಳಿ ಹೆಚ್ಚಲು ಕಾರಣವಾಗಿತ್ತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ