ಅರಣ್ಯ ಹುತಾತ್ಮರ ದಿನಾಚರಣೆ: ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ : ಮೂರು ಸುತ್ತು ಗುಂಡು ಹಾರಿಸುವುದರ ಮೂಲಕ ಸರ್ಕಾರಿ ಗೌರವ
ಕಾರವಾರ: ಅರಣ್ಯ ರಕ್ಷಣೆಯ ಕರ್ತವ್ಯದ ವೇಳೆ ಹುತಾತ್ಮರದವರಿಗೆ ಕಾರವಾರದಲ್ಲಿ ಅರಣ್ಯ ಹುತಾತ್ಮ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅರಣ್ಯ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು. ನಗರದ ಉಪಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾದೀಶ ವಿಜಯಕುಮಾರ್ ಡಿ.ಎಸ್ ಅರಣ್ಯ ಹುತಾತ್ಮರಿಗೆ ಪುಷ್ಪಗಳನ್ನು ಅರ್ಪಿಸಿ ಗೌರವ ಸಲ್ಲಿಸಿದರು.
ಅರಣ್ಯ ಸಂಪತ್ತು ರಕ್ಷಣೆ ವೇಳೆ ಹಾಗೂ ಕಾಡುಗಳ್ಳ ವೀರಪ್ಪನ್ ಹಿಡಿಯುವ ಕಾರ್ಯಾಚರಣೆ ವೇಳೆ 48 ಮಂದಿ ಅರಣ್ಯ ಪಾಲಕರು ಹುತಾತ್ಮರಾಗಿದ್ದು ಅವರ ಸೇವೆಯ ಸವಿನೆನಪಿಗಾಗಿ ಪ್ರತಿವರ್ಷ ಅರಣ್ಯ ಇಲಾಖೆ ವತಿಯಿಂದ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅರಣ್ಯ ಹುತಾತ್ಮರ ಸ್ಮಾರಕ್ಕೆ ಪುಷ್ಪಗಳನ್ನ ಅರ್ಪಿಸಿದ ಬಳಿಕ ಮೂರು ಸುತ್ತು ಕುಶಾಲತೋಪು ಹಾರಿಸುವ ಮೂಲಕ ಗೌರವ ಸೂಚಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಸೆಷನ್ ನ್ಯಾಯಾಧೀಶ ಡಿ.ಎಸ್ ವಿಜಯಕುಮಾರ, ದೇಶದ ಗಡಿಯನ್ನು ಕಾಯುವವರು ಸೈನಿಕರಾದರೆ ಭೂಮಿಯನ್ನು ಕಾಯುವ ಮೂಲಕ ನಮ್ಮನ್ನು ಪೋಷಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿಯು ಅರ್ಥ್ ಸೋಲ್ಜರ್ಸ್ ಎಂದರು. ಈ ಹಿಂದೆ ಕಾಡು ಪ್ರಾಣಿಗಳಿಂದ ಮಾನವರನ್ನು ರಕ್ಷಣೆ ಮಾಡುವಂತಹ ಕಾಲವೊಂದಿತ್ತು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಆದರೆ ಅರಣ್ಯ ಹಾಗು ಪ್ರಾಣಿ ಸಂಕುಲವನ್ನು ರಕ್ಷಿಸುವ ಮೂಲಕ ಮಾನವನ ಉಳಿವಿಗೆ ಅರಣ್ಯ ಇಲಾಖೆಯು ದುಡಿಯುತ್ತಿದೆ. ಜಗತ್ತಿನ ತಂತ್ರಜ್ಞಾನ ಮುಂದುವರೆದಿದೆ. ದಶಕಗಳ ಹಿಂದೆಯೇ ಮಂಗಳಕ್ಕೆ ಟೆಲಿಸ್ಕೋಪ್ ಒಂದನ್ನು ಕಳುಹಿಸಲಾಗಿದೆ. ಆದರೂ ಮಾನವನು ಜೀವಿಸಲು ಯೋಗ್ಯವಾದ ರ್ಗಹ ಇನ್ನೊಂದಿಲ್ಲ. ಹೀಗಾಗಿ ಅದನ್ನು ಕಾಪಾಡುವ ಅರಣ್ಯ ಇಲಾಕೆಯ ಕೆಲಸ ಅತಿ ಮಹತ್ವದ್ದು ಎಂದರು.
ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಕಾರಿ ಡಾ. ಪ್ರಶಾಂತಕುಮಾರ ಕೆ.ಸಿ ಮಾತನಾಡಿ, ಜೋಧಪುರ ಮಹಾರಾಜ ಅಭಯಸಿಂಗ್‌ನ ಸೈನಿಕರು ಕೇಜರ್ಲಿ ಪ್ರಾಂತ್ಯದಲ್ಲಿ ಬಿಷ್ಣೋಯಿ ಸಮುದಾಯದ ಜನರು ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಕೇಜರ್ಲಿ ಮರಗಳನ್ನು ಕಡಿಯಲು ವಿರೋಸಿದ್ದರು. ಬಳಿಕ ಬಿಷಷ್ಣೋಯಿ ಸಮುದಾಯದ 363 ಜನರನ್ನು ಕೊಲ್ಲಲಾಯಿತು. ಈ ದಿನವನ್ನು ಸ್ಮರಿಸಲು ಭಾರತ ಸರಕಾರ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿದೆ ಎಂದರು. ಕರ್ನಾಟಕರದಲ್ಲಿ ಹುತಾತ್ಮರಾದ ಅರಣ್ಯ ಇಲಾಖೆಯ ಸಿಬ್ಬಂದಿಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಇಲಾಖೆಯ ಅಧಿಕಾರಿಗಳು ಹೂಗುಚ್ಚ ಸಮರ್ಪಿಸಿದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಯು ಮೂರು ಸುತ್ತು ಗುಂಡು ಹಾರಿಸುವುದರ ಮೂಲಕ ಗೌರವ ಸಲ್ಲಿಸಿದರು. ಕಾರವಾರ ವಲಯ ಅರಣ್ಯಾಕಾರಿ ರಾಘವೇಂದ್ರ ನಾಯ್ಕ, ಕಾರವಾರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಕಾರಿ ಮಂಜುನಾಥ ಜಿ. ನಾವಿ, ಕಾರವಾರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಕಾರಿ ಕೆ.ಸಿ. ಜಯೇಶ, ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಕಾರಿ ಕೃಷ್ಣ ಅಣ್ಣಯ್ಯಗೌಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ವಿಸ್ಮಯ ನ್ಯೂಸ್, ಕಾರವಾರ