ಹೊನ್ನಾವರ: ಆರೋಗ್ಯವೇ ಭಾಗ್ಯ, ಆರೋಗ್ಯವಂತರು ಸುಖಕರ ಜೀವನವನ್ನು ನಡೆಸಲು ಸಾಧ್ಯ, ವಿದ್ಯಾರ್ಥಿಗಳು ಪೌಷ್ಟಿಕ ಆಹಾರವನ್ನು ಸೇವಿಸಬೇಕು, ಕೈ, ಬಾಯಿ, ಮೂಗು ಹಾಗೂ ಕಿವಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ಮಕ್ಕಳು ಆರೋಗ್ಯವಂತರಾಗಿ ದೇಶದ ಸಂಪನ್ಮೂಲರಾಗಬೇಕು ಎಂದು ಡಾಕ್ಟರ್ ಸುಬ್ರಮಣ್ಯ ಹೆಗಡೆ ಹೊನ್ನಾವರ ಇವರು ನುಡಿದರು. ಇವರು ಹೊನ್ನಾವರ ತಾಲೂಕಿನ ಕವಲಕ್ಕಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆಡಳಿತಾಧಿಕಾರಿ ಎಂ ಎಸ್ ಹೆಗಡೆ ಗುಣವಂತೆಯವರು ಮಾತನಾಡಿ”ಆರೋಗ್ಯವಂತ ಮಗು ಶೀಘ್ರಗತಿಯಲ್ಲಿ ಕಲಿಯುತ್ತದೆ. ಆ ಮಗುವಿನಲ್ಲಿ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಹೆಚ್ಚು ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತದೆ. ಸದಾ ಲವಲವಿಕೆಯಿಂದ ಇರುತ್ತದೆ” ಎಂದು ನುಡಿದರು. ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ರವರು ಸ್ವಾಗತಿಸಿದರು.ಶಿಕ್ಷಕಿ ಪ್ರತಿಮ ಬಿ ಎಂ ವಂದಿಸಿದರು.ರೇಷ್ಮಾ ಜೋಗಳೆಕರ್ ನಿರ್ವಹಿಸಿದರು. ಶಿಕ್ಷಕ ಶಿಕ್ಷಕಿಯರು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಸ್ಮಯ ನ್ಯೂಸ್, ಹೊನ್ನಾವರ