Important
Trending

Drought: ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಉತ್ತರಕನ್ನಡದ 9 ತಾಲೂಕುಗಳು ಸೇರ್ಪಡೆ : ರಾಜ್ಯದ ಸರ್ಕಾರದಿಂದ ಮಹತ್ವದ ಘೋಷಣೆ

ಸಂಪುಟ ಉಪ ಸಮಿತಿಯ ಅಧ್ಯಯನ ವರದಿ ಮೇಲೆ ಮಹತ್ವದ ನಿರ್ಧಾರ

ಕಾರವಾರ: ಮುಂಗಾರು ಮಳೆ ವಿಳಂಬವಾಗಿ ಆಗಮಿಸಿದ್ದರಿಂದ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಬರದ (Drought) ಛಾಯೆ ಆವರಿಸಿತ್ತು. ಮಳೆ ಕಡಿಮೆಯಾದ ಪ್ರದೇಶದಲ್ಲಿ ಸಮರ್ಪಕ ಅಧ್ಯಯನ ಮಾಡಿ, ಬರಪೀಡಿತ ತಾಲೂಕುಗಳನ್ನು ಪಟ್ಟಿ ಮಾಡುವಂತೆ ಸಂಪುಟ ಉಪ ಸಮಿತಿಯೊಂದನ್ನು ಇತ್ತೀಚೆಗೆ ಸರ್ಕಾರ ನೇಮಿಸಿತ್ತು. ಈ ಅಧ್ಯಯನದ ಆಧಾರದ ಮೇಲೆ ಇದೀಗ ರಾಜ್ಯ ಸರ್ಕಾರ 161 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಇವುಗಳ ಜೊತೆಗೆ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ (Drought) ಎಂದು ಘೋಷಣೆ ಮಾಡಲಾಗಿದೆ.

SBI Recruitment 2023: ಉದ್ಯೋಗಾವಕಾಶ: 2 ಸಾವಿರ ಹುದ್ದೆಗಳು: 63 ಸಾವಿರದ ವರೆಗೆ ಮಾಸಿಕ ವೇತನ: Apply Now

ಉತ್ತರಕನ್ನಡ ಜಿಲ್ಲೆಯ 9 ತಾಲೂಕು ಈ ಪಟ್ಟಿಯಲ್ಲಿದೆ. ಶಿರಸಿ, ಹಳಿಯಾಳ, ಮುಂಡಗೋಡು, ಯಲ್ಲಾಪುರ ತಾಲೂಕು ತೀವ್ರ ಬರಪೀಡಿತ ತಾಲೂಕುಗಳಾಗಿ ಘೋಷಣೆ ಮಾಡಲಾಗಿದೆ. ಅಲ್ಲದೆ, ಭಟ್ಕಳ, ಅಂಕೋಲಾ, ಕಾರವಾರ, ಕುಮಟಾ, ಜೋಯ್ಡಾ ತಾಲೂಕುಗಳನ್ನು ಸಾಧಾರಣ ಬರಪೀಡಿತ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ರಾಜ್ಯ ಸರ್ಕಾರದ ಮಾನದಂಡಗಳ ಅನ್ವಯ ಘೋಷಣೆ ಮಾಡಲಾಗಿದೆ. ಸರ್ಕಾರದ ಘೋಷಣೆಯ ಪಟ್ಟಿ ಈ ಕೆಳಗಡೆ ನೀಡಲಾಗಿದೆ.

ಬರಪೀಡಿತ ತಾಲೂಕುಗಳ ಪಟ್ಟಿ

ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button