Important
Trending

Fact-Check: ಭಟ್ಕಳದಲ್ಲಿ ನಿಫಾದಿಂದ ಬಾಲಕಿ ಸಾವು? ಈ ವದಂತಿಯ ಅಸಲಿಯತ್ತು ಏನು?

ಚಿಕಿತ್ಸೆ ನೀಡಿದ ಸರ್ಕಾರಿ ಆಸ್ಪತ್ರೆಯ ವೈದ್ಯರು ಹೇಳಿದ್ದೇನು?

ಭಟ್ಕಳ: ಜ್ವರದಿಂದ ಬಳಲುತ್ತಿದ್ದ ತಾಲೂಕಿನ ಬಾಲಕಿಯೋರ್ವಳು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ತಡರಾತ್ರಿ ಸರಕಾರಿ ಆಸ್ಪತ್ರೆಯಲ್ಲಿ ವರದಿಯಾಗಿದೆ. ಬಾಲಕಿಯು ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಈ ಹಿನ್ನೆಲೆಯಲ್ಲಿ ಕಳೆದ 2 ದಿನಗಳ ಹಿಂದಷ್ಟೇ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ವೈದ್ಯರು ಈಕೆಯ ಜ್ವರಕ್ಕೆ ಸಂಬoಧಿಸಿದoತೆ ಶುಶ್ರುಷೆ ಸಹ ಮಾಡುತ್ತಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ಪ್ರಾಥಮಿಕವಾಗಿ ಜ್ವರಕ್ಕೆ ಮಾಡಬೇಕಾದ ಎಲ್ಲಾ ಪರೀಕ್ಷೆಗಳು (ಸಿ.ವಿ.ಸಿ, ಸಿ.ಆರ್.ಪಿ, ಮಲೇರಿಯಾ, ಡೆಂಗ್ಯೂ) ಮಾಡಿದಾಗ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ವರದಿ ಬಂದಿದ್ದು ದೃಢಪಟ್ಟಿತ್ತು.

ಮೃತ ಬಾಲಕಿ ಫಾತಿಮಾ ಮುನಾ, 5ನೇ ತರಗತಿ ವಿದ್ಯಾರ್ಥಿಯಾಗಿದ್ದು, ಆನಂದ ಆಶ್ರಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಬಳಿಕ ಬಾಲಕಿಯ ಚಿಕಿತ್ಸೆ ಮುಂದುವರೆಸಿದ್ದ ವೈದ್ಯರು ಆಕೆ ಗುಣಮುಖರಾಗುತ್ತಾಳೆಂಬ ವಿಶ್ವಾಸದಲ್ಲಿದ್ದರು. ಆದರೆ ಗುರುವಾರದಂದು ತಡರಾತ್ರಿ 11 ಗಂಟೆಗೆ ಆಕಸ್ಮಿಕವಾಗಿ ಪಿಟ್ಸ್ ಉಂಟಾಗಿ ಬಾಲಕಿಯು ವಾಂತಿ ಮಾಡಿಕೊಂಡು ನಂತರ ಮೃತಪಟ್ಟಿದ್ದಾಳೆ.

ಈ ಬಗ್ಗೆ ಮಾತನಾಡಿದ ಮಕ್ಕಳ ತಜ್ಞ ಡಾ. ಸುರಕ್ಷಿತ್ ಶೆಟ್ಟಿ ‘ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿಯೆ ದಾಖಲಾಗಿದ್ದ ಬಾಲಕಿಯು ಜ್ವರದಿಂದ ಬಳಲುತ್ತಿದ್ದು ಗುರುವಾರದಂದು ಪೀಟ್ಸ್ ನಿಂದಾಗಿ ವಾಂತಿಯ ವೇಳೆ ಇದರ ಅಂಶ ಶ್ವಾಸಕೋಶಕ್ಕೆ ತೆರಳಿದ್ದು ಉಸಿರಾಟಕ್ಕೆ ಸಮಸ್ಯೆಯಾಗಿ ಮೃತಪಟ್ಟಿದ್ದಾಳೆ. ಪ್ರಾಥಮಿಕವಾಗಿ ಪಾರ್ಶ್ವವಾಯುದಿಂದ ಮೃತಪಟ್ಟಿರುವುದಾಗಿ ಕಂಡು ಬಂದಿದೆ. ಆದರೆ ಬಾಲಕಿಯ ಸಾವಿಗೆ ನಿಖರವಾದ ಕಾರಣಕ್ಕಾಗಿ ಆಕೆಯ ಮರಣೋತ್ತರ ಪರೀಕ್ಷೆ ಮಾಡಿದ್ದಲ್ಲಿ ತಿಳಿದು ಬರಲಿದೆ ಎಂದರು.

ಈ ಬಗ್ಗೆ ತಾಲೂಕಾ ಆರೋಗ್ಯಾಧಿಕಾರಿ, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ‘ಬಾಲಕಿಯ ಸಾವಿಗೆ ಪ್ರಾಥಮಿಕ ಹಂತದಲ್ಲಿ ಪಿಟ್ಸ್ ಎಂಬುದು ತಿಳಿದು ಬಂದಿದ್ದು ಮರಣೋತ್ತರ ಪರೀಕ್ಷೆಯಿಂದ ಮಾತ್ರ ನಿಖರವಾದ ಕಾರಣ ತಿಳಿಯಲಿದೆ.ಪ್ರಾಥಮಿಕವಾಗಿ ಬೇರೆ ಯಾವುದೇ ಮಾರಣಾಂತಿಕ ಕಾಯಿಲೆ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ನಿಫಾದಿಂದ ಬಾಲಕಿ ಸಾವು? ಅಸಲಿಯತ್ತು ಏನು?

ಬಾಲಕಿಯು ಸಾವನ್ನಪ್ಪಿದ ಬಳಿಕ ಮುಂಜಾನೆಯಿoದ ಸಾರ್ವಜನಿಕರಿಂದ ಸಾಕಷ್ಟು ಪೋನ್ ಕಾಲಗಳು ಬರುತ್ತಲಿದ್ದು ನಿಫಾ, ಡೆಂಗ್ಯೂ ಸೇರಿದಂತೆ ಇನ್ನಿತರ ಮಾರಣಾಂತಿಕ ಕಾಯಿಲೆಯಿಂದ ಮ್ರತಪಟ್ಟಿದ್ದಾಳೆಂದು ಜನರು ಆತಂಕದಲ್ಲಿ ಕರೆ ಮಾಡುತ್ತಿದ್ದಾರೆ. ಸಾರ್ವಜನಿಕರಲ್ಲಿ ಒಂದು ವಿನಂತಿ. ಸಮರ್ಪಕವಾದ ಮಾಹಿತಿ ಇಲ್ಲದೇ ಬಾಲಕಿಯ ಸಾವಿಗೂ ನಿಫಾ ಹಾಗೂ ಇನ್ನುಳಿದ ಕಾಯಿಲೆಗು ಯಾವುದೇ ಕಾರಣವಿಲ್ಲ. ಜನರು ಇಲ್ಲ ಸಲ್ಲದ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದನ್ನು ನಿಲ್ಲಿಸಬೇಕು. ನಿಫಾ, ಡೆಂಗ್ಯೂ ಸೇರಿದಂತೆ ಯಾವುದೇ ಮಾರಣಾಂತಿಕ ರೋಗದ ಲಕ್ಷಣಗಳಿಲ್ಲ ಜನರು ಸುಮ್ಮನೆ ನಿಫಾದಂತಹ ರೋಗಗಳು ಭಟ್ಕಳದಲ್ಲಿ ಕಾಣಿಸಿಕೊಂಡಿದೆ ಎಂದು ಆತಂಕ ಪಡುವುದು ಬೇಡ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ ಸ್ಪಷ್ಟಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button