Important
Trending

ಅಂಕೋಲಾದಲ್ಲಿ ಸಾವಿರದ ಸನಿಹಕ್ಕೆ ತಲುಪಿದ ಗಂಟಲುದ್ರವ ಪರೀಕ್ಷೆ?

  • 1)ಗಂಟಲು ದ್ರವ ಸಂಗ್ರಹಿಸುವವರಿಗೆ ತಮ್ಮ ಗಂಟಲುದ್ರವ ಪರೀಕ್ಷೆಗೆ ಒಳಪಡಿಸಬೇಕಾದ ಅನಿವಾರ್ಯತೆ
  • 2) ಜೀವದ ಹಂಗು ತೊರೆದು ಸಾರ್ಥಕ ಸೇವೆ ಸಲ್ಲಿಸುತ್ತಿರುವ ಲ್ಯಾಬ್ ಸಿಬ್ಬಂದಿಗಳು.

ಅಂಕೋಲಾ : ಕಳೆದ 2-3 ದಿನಗಳಿಂದ ಅಬ್ಬರಿಸುತ್ತಿದ್ದ ಮಳೆರಾಯ ಶುಕ್ರವಾರ ಮಧ್ಯಾಹ್ನದಿಂದ ಕೊಂಚ ಬಿಡುವು ನೀಡಿದ್ದಾನೆ. ಅದೇ ವೇಳೆ ತಾಲೂಕಿನಲ್ಲಿ ಯಾವುದೇ ಹೊಸ ಕೋವಿಡ್-19 ಪ್ರಕರಣಗಳು ಕಾಣಿಸಿಕೊಳ್ಳದೇ ಜನತೆ ನೆಮ್ಮದಿಯಿಂದ ಇರುವಂತಾಗಿದೆ.
ಗಂಟಲು ದ್ರವ ಸಂಗ್ರಹಿಸುವವರಿಗೆ ತಮ್ಮ ಗಂಟಲುದ್ರವ ಪರೀಕ್ಷೆಗೆ ಒಳಪಡಿಸಬೇಕಾದ ಅನಿವಾರ್ಯತೆ : ಸೋಂಕಿತ ಮತ್ತು ಶಂಕಿತ ವ್ಯಕ್ತಿಗಳ ಗಂಟಲುದ್ರವ ಸಂಗ್ರಹಿಸುವ ಲ್ಯಾಬ್ ಟೆಕ್ನಿಸಿಯನ್‍ಗಳೇ ಸ್ವತಃ ತಮ್ಮ ಗಂಟಲುದ್ರವವನ್ನು ಪರೀಕ್ಷೆಗೆ ಒಳಪಡಿಸಬೇಕಾದ ಅನಿವಾರ್ಯತೆ ಮತ್ತು ಆತಂಕ ಅಂಕೋಲಾದಲ್ಲಿ ಕಂಡುಬಂದಿದ್ದು, ಶುಕ್ರವಾರ ಸರ್ಕಾರಿ ಆಸ್ಪತ್ರೆಯ ಲ್ಯಾಬ್ ಸಿಬ್ಬಂದಿಗಳು ಸೇರಿದಂತೆ ಮತ್ತೆ ಹೊಸದಾಗಿ 35 ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟಾರೆಯಾಗಿ ಈವರೆಗೆ 948 ಗಂಟಲುದ್ರವ ಪರೀಕ್ಷೆಗೆ ಕಳುಹಿಸಿದಂತಾಗಿದೆ. ಇಂದು ಬಂದ 18 ವರದಿಗಳು ನೆಗೆಟಿವ್ ಬಂದಿದೆ ಎನ್ನಲಾಗಿದೆ. ಇನ್ನೂ ಕೆಲವು ವರದಿಗಳು ಬರಬೇಕಿದೆ.

[sliders_pack id=”1487″]

ಕಾರವಾರ ತಾಲೂಕಿನ ಮುದಗಾದ ವ್ಯಕ್ತಿಯೋರ್ವರು ಲ್ಯಾಬ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತದ್ದು ವಾರದಲ್ಲಿ 1 ದಿನ ಅಂಕೋಲಾದಲ್ಲಿಯೂ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಅವರಿಗೆ ಪಾಸಿಟಿವ್ ಧೃಡಪಟ್ಟ ಹಿನ್ನಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಅಂಕೋಲಾದ ಲ್ಯಾಬ್ ಸಿಬ್ಬಂದಿಗಳ ಗಂಟಲುದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ.
ತಾಲೂಕಿನಲ್ಲಿ ಕೊರೊನಾ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸುತ್ತಿರುವ ವಿವಿಧ ಸ್ತರದ ಯೋಧರು ತಮ್ಮ ಅಪರಿಮಿತ ಸೇವೆಯ ಮೂಲಕ ಗಮನ ಸೆಳೆದಿದ್ದಾರೆ. ತೆರೆಯ ಹಿಂದೆ ನಿಂತು ತಮ್ಮ ಜೀವದ ಹಂಗು ತೊರೆದು ಸಾರ್ಥಕ ಸೇವೆ ಸಲ್ಲಿಸುತ್ತಿರುವ ಲ್ಯಾಬ್ ಸಿಬ್ಬಂದಿಗಳ ಶ್ರಮವನ್ನು ಗೌರವಿಸಲೇಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button