ಗಾಳಿಸುದ್ದಿಗೆ ಕಿವಿಗೊಡಬೇಡಿ
ಕಠಿಣ ಕಾನೂನು ಕ್ರಮದ ಎಚ್ಚರಿಕೆ
ಶಿರಸಿ: ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಮಾರಿಕಾಂಬಾ ದೇಗುಲದ ಸಿಬ್ಬಂದಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಯಾವುದೇ ಸಿಬ್ಬಂದಿಗಳಿಗೂ ಕರೊನಾ ವೈರಸ್ ತಗಲಿರುವುದಿಲ್ಲ. ಕೆಲ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದು, ಇಂತಹ ಯಾವುದೇ ವದಂತಿಗಳಿಗೆ ಯಾರು ಕಿವಿ ಕೊಡಬಾರದು ಎಂದು ಶಿರಸಿ ಮಾರಿಕಾಂಬಾ ದೇವಾಲಯದ ಅಧ್ಯಕ್ಷರಾದ ಡಾ॥ ವೆಂಕಟೇಶ್ ಎಲ್ ನಾಯ್ಕ್ ವಿನಂತಿಸಿಕೊಂಡಿದ್ದಾರೆ.